ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಕೆಳಗಳಹಟ್ಟಿ ಗ್ರಾಮದಲ್ಲಿ ರಸ್ತೆಗೆ ಹಂಪ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ರಸ್ತೆ ಬಂದ್ ಮಾಡಿದ್ದಾರೆ.
ಇದು ಚಿತ್ರದುರ್ಗದಿಂದ ಚಳ್ಳಕೆರೆ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ಚಿತ್ರದುರ್ಗ, ಮಂಗಳೂರು, ಬಳ್ಳಾರಿ, ಆಂದ್ರ, ಚಳ್ಳಕೆರೆ ಸೇರಿದಂತೆ ನಾನಾ ಭಾಗಕ್ಕೆ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಗ್ರಾಮದ ರಸ್ತೆಗೆ ಹಂಪ್ಸ್‌ನ ವ್ಯವಸ್ಥೆ ಇರದ ಕಾರಣದಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಪಾದಚಾರಿಗಳಿಗೆ ಕೂಡ ಸಂಚರಿಸಲು ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು ಬಸ್ ಗಳು ಇಲ್ಲಿ ನಿಲ್ಲಿಸದೆ ಮುಂದಿನ ಗ್ರಾಮದಲ್ಲಿ ನಿಲ್ಲಿಸುತ್ತಿದ್ದು ಅಲ್ಲಿಂದ ಕೆಳಗಳಹಟ್ಟಿ ಗ್ರಾಮಕ್ಕೆ ವಿದ್ಯಾರ್ಥಿಗಳು ನಡೆದುಕೊಂಡು ಬರುವ ಪರಿಸ್ಥಿತಿಯಾಗಿದೆ. ವಾಹನಗಳು ವೇಗವಾಗಿ ಸಂಚಾರ ಮಾಡುವುದರಿಂದಾಗಿ ಪಾದಚಾರಿಗಳಿಗೆ ಸಂಚರಿಸಲು, ರೈತರಿಗೆ ಜಾನುವಾರುಗಳನ್ನ ಹೊಡೆದುಕೊಂಡು ಹೋಗಲು ಕೂಡ ಬಯ ಪಡುವ ಪರಿಸ್ಥಿತಿ ಇದ್ದು ಹಲವು ಬಾರಿ ಅಪಘಾತಗಳು ಕೂಡ ನಡೆದಿದ್ದು, ಪ್ರಾಣ ಹಾನಿ ಸಹ ಉಂಟಾಗಿರುವುದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.
ಇದಕ್ಕೆ ಸಂಬಂಧಪಟ್ಟ ಇಲಾಖೆ ಇತ್ತ ಕಡೆ ಗಮನ ಹರಿಸಿ ಹಂಪ್ ಗಳನ್ನ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.
PublicNext
15/12/2024 02:51 pm