ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ರಾಜಕಾಲುವೆ ದುರ್ವಾಸನೆಯಿಂದ ಮುಕ್ತಿ ಯಾವಾಗ..?

ಚಳ್ಳಕೆರೆ: ನಗರ ಹುಟ್ಟಿದಾಗಿನಿಂದಲೂ ನಗರಕ್ಕೆ ಹೊಂದಿಕೊಂಡ ರಾಜಕಾಲುವೆ ಇದೆ. ನಗರ ಬೆಳೆದಂತೆ ಜನರು ಕೆರೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮಳೆ ನೀರು ಸರಾಗವಾಗಿ ಹರಿಯಲು ಬಿಡದೆ ಎಲ್ಲೆಂದರಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿದ್ದಾರೆ.

ಆದರೆ ಇಲ್ಲೊಂದು ರಾಜಕಾಲುವೆ ಇದೆ. ಯಾರೂ ಒತ್ತುವರಿ ಮಾಡದೇ ಇದ್ರೂ ಈ ನಗರದ ಸುಮಾರು 200 ಮನೆಗಳು ದುರ್ವಾಸನೆ ಸೊಳ್ಳೆ ಕಾಟದಿಂದ ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರ್ತಾರೆ ಹೋಗ್ತಾರೆ. ಆದರೆ ಕೆಲಸ ಮಾತ್ರ ‌ಆಗ್ತಿಲ್ಲ…

ಇದು ಛೋಟಾ ಬಾಂಬೆ ಎಂದು ಹೆಸರು ಪಡೆದಿರುವ ಚಳ್ಳಕೆರೆ ಆಯಿಲ್ ಸಿಟಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಎರಡನೇ ವಾರ್ಡ್ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ. ರಾಜಕಾಲುವೆಗೆ ಹೊಂದಿಕೊಂಡಂತೆ ಸುಮಾರು 150 ಕ್ಕೂ ಹೆಚ್ಚು ಕುಟುಂಬಸ್ಥರು ವಾಸ ಮಾಡುತ್ತಿದ್ದಾರೆ. ಹಾಗಂತ ಇವರು‌‌ ಯಾರೂ ರಾಜಕಾಲುವೆ ಒತ್ತುವರಿ ಮಾಡಿಲ್ಲ. ಆದರೂ ಇವರಿಗೆ ನಿರಂತರ ಸೊಳ್ಳೆ ಕಾಟ ತಪ್ಪಿಲ್ಲ. ಸಂಜೆಯಾದರೆ ಮನೆಯಿಂದ ಹೊರಬರಲು ಅಸಾಧ್ಯವಾದಷ್ಟು ಸೊಳ್ಳೆ, ದುರ್ವಾಸನೆ ಕೂಡಿ ಇಲ್ಲಿನ ಜನ ಸಂಕಷ್ಟ ಎದುರಿಸುತ್ತಿದ್ದಾರೆ.

Edited By : Manjunath H D
PublicNext

PublicNext

13/12/2024 07:44 pm

Cinque Terre

9.25 K

Cinque Terre

0

ಸಂಬಂಧಿತ ಸುದ್ದಿ