ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕಿನ ಮಿರಾಸಾಭಿಹಳ್ಳಿ ಗ್ರಾಮದ ಸಮೀಪ ಇರುವ ಬಿಸಿಎಂ ಬಾಲಕರ ವಿದ್ಯಾರ್ಥಿಗಳು ನಿಲಯದಲ್ಲಿ ಮೂಲ ಸೌಲಭ್ಯಗಳಾದ ಫ್ಯಾನ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಎಲ್ಲಿ ನೋಡಿದರೂ ನೇತು ಬಿದ್ದ ವಿದ್ಯುತ್ ವೈರ್‌ಗಳು, ಮುರಿದ ಸ್ವಿಚ್‌ಗಳು ಸೇರಿದಂತೆ ಇಲ್ಲಿ ಹಲವು ಸಮಸ್ಯೆಗಳ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಈ ಬೆನ್ನಲ್ಲೇ ಬಿಸಿಎಂ ಬಾಲಕರ ಹಾಸ್ಟೆಲ್‌ಗೆ ಹೊಸ ಫ್ಯಾನ್, ಬಲ್ಬ್ ವ್ಯವಸ್ಥೆ, ನೇತಾಡುತ್ತಿದ್ದ ವೈರ್ ಸರಿಪಡಿಸಿ, ಶುದ್ಧ ಕುಡಿಯು ನೀರಿನ ವ್ಯವಸ್ಥೆ ಮಾಡಲಾಗಿದೆ.
ಸುದ್ದಿ ಬೆನ್ನಲ್ಲೆ ಹಾಸ್ಟೆಲ್ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಕಂಡುಕೊಂಡಿದ್ದಾರೆ. ಈ ಹಿನ್ನಲೆ ವಿದ್ಯಾರ್ಥಿಗಳು ಪಬ್ಲಿಕ್ ನೆಕ್ಸ್ಟ್ ಡಿಜಿಟಲ್ ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ್ದಾರೆ.
PublicNext
13/12/2024 07:54 am