ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಸಾಧಕರಿಗೆ ಪ್ರಶಸ್ತಿ ನೀಡಲು ಭಾರತೀಯ ದಲಿತ ಸಂಘರ್ಷ ಸಮಿತಿ ನಿರ್ಧಾರ

ಚಿತ್ರದುರ್ಗ : ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಲವು ಹೋರಾಟಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನ ನೀಡಿದ ಮಹನೀಯರ ಹೆಸರನ್ನು ಅಜಾರಮರವಾಗಿಸಲು ಅವರ ಹೆಸರಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ ಅಂತಾ ಭಾರತೀಯ ಡಿಎಸ್ಎಸ್ ಅಧ್ಯಕ್ಷ ಪ್ರಕಾಶ ಬೀರಾವರ್ ಹೇಳಿದ್ದಾರೆ.

ಜಿಲ್ಲೆಯ ನೀರಾವರಿ ಹೋರಾಟ, ದಲಿತಪರ ಹೊರಾಟ, ಅಹಿಂದಾ ಹೋರಾಟ, ನೇರ ರೈಲುಮಾರ್ಗ ಸೆರಿದಂತೆ ಅನೇಕ ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಮುರುಘರಾಜೇಂದ್ರ ಒಡೆಯರು ಹಾಗೂ ಎಂ. ಜಯಣ್ಣ ರವರ ಹೆಸರನ್ನು ಚಿರಸ್ಥಾಯಿ‌ಯಾಗಿ ಮಾಡುವ. ಉದ್ದೇಶದಿಂದ ಇಬ್ಬರೂ ಮಹನೀಯರ ಹೆಸರಲ್ಲಿ ರಾಜ್ಯ‌ಮಟ್ಟದ ಪ್ರಶಸ್ತಿಯನ್ನು ಸ್ಥಾಪಿಸಲು ಚಿಂತನೆ‌ ನಡೆಸಿದ್ದು, ಸಾರ್ವಜನಿಕರು ಸಾಧಕರ ಹೆಸರನ್ನು ಸೂಚಿಸಬೇಕು ಎಂದರು.

ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲು ಈ ಸಂಬಂಧ ಕಮೀಟಿ ರಚನೆ ಮಾಡಲಿದ್ದು, ಮುಂಬರುವ ಕಮೀಟಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. 25 ಸಾವಿರ ನಗದು ಸೇರಿದಂತೆ, ಪ್ರಶಸ್ತಿ ಪ್ರದಾನ ಮಾಡಲು ಭಾರತೀಯ ಡಿಎಸ್ಎಸ್ ದಿಂದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕರು ಪ್ರಶಸ್ತಿಗೆ ಸಾಧಕರ ಹೆಸರು ಸೂಚಿಸಬೇಕು. ರಾಜ್ಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ‌ ಇಬ್ಬರೂ ಮಹನೀಯರ ಹೆಸರು ಚಿರಸ್ಮರಣೀಯ ಗೊಲಾಗುವುದು ಎಂದು ಪ್ರಕಾಶ ಬೀರಾವರ ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

12/12/2024 06:29 pm

Cinque Terre

920

Cinque Terre

0

ಸಂಬಂಧಿತ ಸುದ್ದಿ