ಹೊಳಲ್ಕೆರೆ: ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮ ಸ್ಥಾಪಿಸಿದ ರಾಘವೇಂದ್ರ ಸ್ವಾಮೀಜಿ ಬದುಕಿದ್ದಾಗ ಸ್ವತಃ ತಾವೇ ಗ್ರಾಮದ ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸಿ ರಂಗೋಲಿ ಹಾಕುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮದ ಜನರಿಗೆ ಸ್ವಚ್ಛತೆಯ ಪಾಠ ಹೇಳಿಕೊಟ್ಟ ಇಂತಹ ಪುಣ್ಯಭೂಮಿ ಈಗ ಕಸದ ಗೂಡಾಗಿ ಪರಿಣಮಿಸಿದೆ.
ಗ್ರಾಮದ ತುಂಬೆಲ್ಲ ಕಸ ತುಂಬಿ ತುಳುಕುತ್ತಿದೆ. 4,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಲ್ಲಾಡಿಹಳ್ಳಿ ಪಟ್ಟಣವಾಗಿ ಬೆಳೆಯುತ್ತಿದೆ. ಗ್ರಾಮದಲ್ಲಿ ವಾಣಿಜ್ಯ ಚಟುವಟಿಕೆಗಳೂ ಬಿರುಸಿನಿಂದ ನಡೆಯುತ್ತಿವೆ. ಇಲ್ಲಿ ಅನಾಥ ಸೇವಾಶ್ರಮ ಇದ್ದು, ಹಲವು ಶಾಲಾ ಕಾಲೇಜುಗಳು, ಆಯುರ್ವೇದ ಕಾಲೇಜು, ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿವೆ. ಮಲ್ಲಾಡಿಹಳ್ಳಿ ಆಶ್ರಮ ಶಿಸ್ತು, ಸ್ವಚ್ಛತೆಗೆ ಹೆಸರಾಗಿದೆ. ಆದರೆ ತ್ಯಾಜ್ಯ ನಿರ್ವಹಣೆ ಸಮಸ್ಯೆಯಿಂದಾಗಿ ಗ್ರಾಮ ಮಲಿನಗೊಂಡಿದೆ. ಕಸದ ವಿಚಾರವಾಗಿ ಗ್ರಾಮದಲ್ಲಿ ನಿತ್ಯ ಗಲಾಟೆಗಳಾಗುತ್ತಿವೆ.
Kshetra Samachara
12/12/2024 09:11 pm