ಮೊಳಕಾಲ್ಮುರು: ಮೊಳಕಾಲ್ಮುರು ಪಟ್ಟಣದ ಎಸ್ ಬಿಐ ಬ್ಯಾಂಕ್ ಮುಂಭಾಗದಲ್ಲಿರುವ ಎಟಿಎಂನಲ್ಲಿ ವಂಚಕನೊಬ್ಬ ವ್ಯಕ್ತಿಯೊಬ್ಬನಿಗೆ ಎಟಿಎಂ ಕಾರ್ಡ್ ಬದಲಿಸಿ ವಂಚಿಸಿದ್ದಾನೆ.
ಮೊಳಕಾಲ್ಮುರಿನ ನಿವಾಸಿ ದಾದಾಪೀರ್ ಎಂಬುವ ವ್ಯಕ್ತಿ ಬುಧವಾರದಂದು ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲದ ಹಣ ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ರೆಡಿಟ್ ಆಗಿತ್ತು. ಈ ಹಣ ಪಡೆಯಲು ಎಸ್‌ಬಿಐ ಎಟಿಎಂನಲ್ಲಿ 10 ಸಾವಿರ ರೂಪಾಯಿ ಡ್ರಾ ಮಾಡಿ ನಂತರ ಮಿನಿ ಸ್ಟೇಟ್ಮೆಂಟ್ ತೆಗೆಯಲು ಹಿಂಬದಿಯಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಕೊಟ್ಟು ಮಿನಿ ಸ್ಟೇಟ್ಮೆಂಟ್ ತೆಗೆದುಕೊಡಿ ಎಂದು ಹೇಳಿದ್ದಾನೆ. ಆದ್ರೆ ಅಪರಿಚಿತ ವ್ಯಕ್ತಿಯು ಮಿನಿ ಸ್ಟೇಟ್ಮೆಂಟ್ ತೆಗೆದ ನಂತರ ಎಟಿಎಂ ಕಾರ್ಡ್ ಬದಲಿಸಿ, ಬೇರೊಂದು ಎಟಿಎಂ ಕಾರ್ಡ್ ನೀಡಿ ತೆರಳಿದ್ದಾನೆ.
ಇದಾದ ಬಳಿಕ ಕೆಲವೇ ಗಂಟೆಗಳಲ್ಲಿ ರಾಂಪುರ ಗ್ರಾಮದಲ್ಲಿ ದಾದಾಪೀರ್ ಎಂಬುವ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿಕೊಂಡು ವಂಚಕ ಮೂರು ಬಾರಿ 10 ಸಾವಿರ ರೂಪಾಯಿ ಡ್ರಾ ಮಾಡಿದ್ದಾನೆ. ಕೂಡಲೇ ಮೋಸಕ್ಕೆ ಓಳಾಗದ ದಾದಾಪೀರ್ ಸಮೀಪದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗೆ ವಿಷಯ ತಿಳಿಸಿದ್ದಾನೆ. ಮ್ಯಾನೇಜರ್ ಅಕೌಂಟ್ ಬ್ಲಾಕ್ ಮಾಡಿದ್ದಾರೆ. ತನ್ನ ಎಟಿಎಂ ನೀಡದೆ ಬೇರೊಂದು ಎಟಿಎಂ ನೀಡಿ ವಂಚಿಸಿ ಹಣ ಎಗಿರಿಸಿರುವ ವಂಚಕನ ವಿರುದ್ಧ ಇದೀಗ ಹಣ ಕಳೆದುಕೊಂಡಿರುವ ದಾದಾಪೀರ್ ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾನೆ.
PublicNext
12/12/2024 07:49 pm