ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಶಾಲಾ ‌ಕಾಲೇಜಿಗಳ ಸಮೀಪ ಮಿತಿಮೀರಿದ ತಂಬಾಕು ಉತ್ಪನ್ನಗಳ ಮಾರಾಟ

ಚಿತ್ರದುರ್ಗ: ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನಗಳ ಮಾರಾಟ, ಬಳಕೆ ತೀವ್ರಗೊಂಡಿದ್ದು ಯುವಜನರು ಬೀಡಿ, ಸಿಗರೇಟು, ಚುಟ್ಟಾ, ಗುಟ್ಕಾ ಮುಂತಾದ ಮತ್ತು ಬರಿಸುವ ಪದಾರ್ಥಗಳಿಗೆ ಮಾರು ಹೋಗಿ ದಾಸರಾಗುತ್ತಿದ್ದಾರೆ.

ಶಾಲಾ, ಕಾಲೇಜುಗಳ ಸಮೀಪದಲ್ಲೇ ಪೆಟ್ಟಿಗೆ ಅಂಗಡಿಗಳಲ್ಲೂ ತಂಬಾಕು ಉತ್ಪನ್ನಗಳು ಬಹಳ ಸುಲಭವಾಗಿ ಯುವಜನರ ಕೈಗೆಟುಕುತ್ತಿವೆ. ಸಿಗರೇಟು ಬೀಡಿ, ಸೇದುವುದು ಒಂದೆಡೆಯಾದರೆ ಮತ್ತು ಬರಿಸುವಂತಹ ಗುಟ್ಕ ಮಧು ಚೈನಿಕೈನಿ ಹಾಕುವವರ ಯುವಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ಭಾಗದಿಂದ ಬರುವ ನೂರಾರು ಮಾದರಿಯ ಗುಟ್ಕಾಗಳು, ಜಗಿಯುವ ತಂಬಾಕುಗಳು ಜನರಿಗೆ ದೊರೆಯುತ್ತಿವೆ. ಬಹುತೇಕ ಗುಟ್ಕಾ, ತಂಬಾಕುಗಳನ್ನು ನಿಷೇಧಿತ ರಾಸಾಯನಿಕಗಳನ್ನು ಬಳಸಿ ಉತ್ಪಾದಿಸಲಾಗಿದೆ. ಹೀಗಾಗಿ ಜನರು ಕ್ಷಣಿಕ ಉನ್ಮಾದಕ್ಕಾಗಿ ಈ ಪದಾರ್ಥಗಳಿಗೆ ದಾಸರಾಗುತ್ತಿದ್ದಾರೆ..

Edited By : PublicNext Desk
Kshetra Samachara

Kshetra Samachara

09/12/2024 09:03 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ