ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪ್ರವಾಸಿಗರ ಮನ ಸೆಳೆಯುತ್ತಿದೆ ಆಡಿಕೊಲ್ ಜಲಪಾತ

ಬೈಲಹೊಂಗಲ: ಹಸಿರು ಹೊತ್ತು ನಿಂತಿರುವ ಬೆಟ್ಟದ ಮಧ್ಯೆ ಜಲರಾಶಿ ಧುಮ್ಮಿಕ್ಕುವ ಸೌಂದರ್ಯ ವರ್ಣಿಸಲಾಗದು. ಪ್ರಕೃತಿ ವಿಸ್ಮಯವನ್ನು ಪದಗಳಲ್ಲಿ ಬಣ್ಣಿಸಲಾಗದು ಅಂತಹ ಸೊಬಗಿನ ತಾಣವೇ ಆಡಿಕೊಲ್ ಜಲಪಾತ.

ಭೂಮಿ ಮೇಲಿನ ಸ್ವರ್ಗ ಪ್ರವಾಸಿಗರ ಮನಸೂರೆಗೊಳಿಸುವ ಪ್ರಕೃತಿ ಸೊಬಗು ಗುಡ್ಡದ ಮೇಲಿನ ಕಲ್ಲು ಬಂಡೆಗಳನ್ನು ಸೀಳಿಕೊಂಡು ನೀರು ಧುಮ್ಮಿಕುತ್ತಿದ್ರೆ ಆ ಸೌಂದರ್ಯ ರಾಶಿ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಆಡಿಕೊಲ್ ಜಲಪಾತ ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಕಾರ್ಲಕಟ್ಟಿ ತಾಂಡೆಯಿಂದ ಒಂದು ಕೀಮಿ ಅಂತರದಲ್ಲಿದೆ. ಮಳೆಗಾಲದಲ್ಲಿ ಸೃಷ್ಟಿಯಾಗುವ ಈ ಜಲಪಾತದ ಸುಂದರ ಪ್ರಕೃತಿ ಸೊಬಗು ನೋಡಲು ಒಂದು ಕಿ.ಮಿ. ತಾಂಡೆಯಿಂದ ಕಾಲುದಾರಿಯಲ್ಲಿ ನಡೆಯಬೇಕು. ಗುಡ್ಡದಲ್ಲಿ ಉತ್ತರ ಹಾಗೂ ದಕ್ಷಿಣ ದಿಕ್ಕಿನಿಂದ ಹರಿದು ಬರುವ ಝರಿಯಿಂದ ಈ ಜಲಪಾತ ಸೃಷ್ಟಿಯಾಗಿದೆ. ವಿಕೇಂಡ್‌ನಲ್ಲಿ ಪ್ರವಾಸಿಗರು ಆಗಮಿಸಿ ನಯನ ಮನೋಹರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸೆಲ್ಪಿ ಕ್ಲಿಕ್ಕಿಸಿಕೊಂಡು ಎಂಜಾಯ ಮಾಡುತ್ತಿದ್ದಾರೆ.

Edited By : Shivu K
PublicNext

PublicNext

10/10/2022 01:12 pm

Cinque Terre

30.97 K

Cinque Terre

0

ಸಂಬಂಧಿತ ಸುದ್ದಿ