ಅಥಣಿ : ಸಿರಿಧಾನ್ಯಗಳ ತವರೂರು ಏನಿಸಿಕೊಂಡ ಉತ್ತರ ಕರ್ನಾಟಕದಲ್ಲಿ ನೂರಾರು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ ಜೋಳ, ಮುಸುಕಿನ ಜೋಳ, ಕಡಲೆ,ಗೋದಿ ಹಲವು ಬಗೆಯ ಬೆಳೆಗಳಿಗೆ ನೀರಿಲ್ಲದೆ ಬೆಳೆಗಳು ಕಳೆಗುಂದುತಿದ್ದವು ನಿನ್ನೆ ಸಾಯಂಕಾಲ ಅಥಣಿ ತಾಲೂಕಿನ ಸಂಬರಗಿ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಮಳೆ ಅಬ್ಬರಿಸಿದ್ದು ಕೆಲ ರೈತರಿಗೆ ಸಂತಸ ತಂದರೆ ಕೆಲವರಿಗೆ ಅಘಾತ ಮೂಡಿಸಿದೆ.
ಹೌದು ಮಳೆ ಅವಂತರದಿಂದ ಮುಂಗಡ ಬಿತ್ತನೆ ಮಾಡಿದ ಜೋಳದ ಬೆಳೆಗಳು ನೆಲ ಕಚ್ಚಿವೆ. ಮಳೆ ಅಲ್ಪವಾದರೂ ಗಾಳಿಯ ವೇಗಕ್ಕೆ ಬೆಳೆಗಳು ಸಂಪೂರ್ಣ ನೆಲಸಮವಾಗಿವೆ ಇದರಿಂದ ಕಷ್ಟ ಪಟ್ಟು ಬೆಳೆದ ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.
ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ ಬೆಳೆಗೂ ಫೆಂಗಲ್ ಅವಾಂತರ ತಂದಿದ್ದು ಕೈಗೇಟುಕುವ ಹಂತದಲ್ಲಿ ಬೆಳೆಗಳಿಗೆ ರೋಗಭಾದೆಯ ಕಾಟ ಎದುರಗುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಮಳೆಯಾಶ್ರೀತ ಬೆಳೆಗಳಿಗೆ ಮಳೆಯಿಂದ ಅನುಕೂಲವಾದರೆ. ಕೆಲ ಬೆಳೆಗಳಿಗೆ ಹಾನಿವುಂಟು ಮಾಡಿದೆ.
Kshetra Samachara
06/12/2024 10:17 pm