ಅಥಣಿ: ಗಡಿ ಜನರ ಕನಸಿನ ಯೋಜನೆಗೆ ಸರ್ಕಾರದ ವಿಳಂಬ ನೀತಿಗಳೇ ಕಾರಣ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಡಿ ಜನರಿಗೆ ಭಾರಿ ಅನ್ಯಾಯವಾಗಿದೆ. ಈ ಕುರಿತು ರೈತ ಮುಖಂಡರು ರಾಜ್ಯ ಸರ್ಕಾರಕ್ಕೆ ಅಹೋ ರಾತ್ರಿ ಧರಣಿ ಎಚ್ಚರಿಕೆ ನೀಡಿದ್ದಾರೆ.
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರ ಸಭೆ ಕರೆದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಡಿಸೆಂಬರ್ 13ರಂದು ಬೃಹತ್ ಪ್ರತಿಭಟನೆ ಮೂಲಕ ಧರಣಿ ಸತ್ಯಾಗ್ರಹ ಹಾಗೂ ಡಿ.14ರಂದು ಅಥಣಿ ಸಂಪೂರ್ಣ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಹೋರಾಟಕ್ಕೂ ಮೊದಲೇ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಸ್ವತಹ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಲಾಯಿತು. ನಾಳೆಯಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿಶೇಷವಾಗಿ ಕಾಗವಾಡ ತಾಲೂಕಿನ ಬಸವೇಶ್ವರ ಏತ ನೀರಾವರಿ ವಿಚಾರವಾಗಿ ಚರ್ಚೆಯಾಗಬೇಕು ಹಾಗೂ ಶೀಘ್ರವೇ ಸರ್ಕಾರ ಮುತುವರ್ಜಿ ವಹಿಸಿ ತಾಂತ್ರಿಕ ದೋಷ ನಿವಾರಣೆ ಮಾಡಿ ಶೀಘ್ರವೇ ಕಾಲುವೆಗೆ ನೀರು ಪೂರೈಕೆ ಮಾಡುವಂತೆ ಒತ್ತಾಯ ಮಾಡಲಾಯಿತು.
PublicNext
08/12/2024 04:42 pm