ಬೈಲಹೊಂಗಲ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮೈಕೊರೆಯುವ ಚಳಿ ಪ್ರಾರಂಭವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ತಾಲ್ಲೂಕಿನಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಳಿ ಹಾಗೂ ಥಂಡಿ ಗಾಳಿಯಿಂದ ವಯೋವೃದ್ಧರು ಮನೆಯಿಂದ ಹೊರ ಬರುತ್ತಿಲ್ಲ. ವಯಸ್ಕರು ಉಣ್ಣೆ ಬಟ್ಟೆ ಧರಿಸಿದರೆ ಮಕ್ಕಳು ಕೂಡ ಸ್ವೆಟರ್ ಮೊರೆ ಹೋಗಿದ್ದಾರೆ. ಶಾಲೆಗಳಿಗೆ ತೆರಳುವ ಮಕ್ಕಳು ಕೂಡ ಸ್ವೆಟರ್ ಧರಿಸಿ ಹೋಗುತ್ತಿದ್ದಾರೆ. ಪಟ್ಟಣದ ಬಸ್ ನಿಲ್ದಾಣ, ಇಂಚಲ ರಸ್ತೆ, ಬಜಾರ ರಸ್ತೆ ಭಾಗದಲ್ಲಿ ಬೆಂಕಿ ಹಚ್ಚಿ ದೇಹ ಕಾವು ಮಾಡಿಕೊಳ್ಳುತ್ತಿದ್ದಾರೆ.
ರಾತ್ರಿ 8 ಗಂಟೆಯಿಂದ ಬೆಳಗಿನ 6 ಗಂಟೆಗೆ ತಾಪಮಾನ ಕ್ಷೀಣಿಸುತ್ತಿದೆ. ಹಗಲಿನಲ್ಲಿ ಸೂರ್ಯನ ಶಾಖ ಹಿತವೆನಿಸುತ್ತಿದ್ದು ಬಹುತೇಕ ಜನರು ಸೂರ್ಯ ಬರುವಿಕೆಗೆ ಕಾಯುವಂತಾಗಿದೆ.
ಕಳೆದ ಒಂದು ವಾರದಿಂದ ಚಳಿ ಹೆಚ್ಚಾಗಿದೆ. ಜನರು ದೇಹ ಬಿಸಿ ಮಾಡಿಕೊಳ್ಳಲು ಬೆಂಕಿಯ ಮೊರೆ ಹೋಗುತ್ತಿದ್ದಾರೆ ಎಂದು ಪಟ್ಟಣದ ನಿವಾಸಿ ಮಂಜುನಾಥ ಬಗಾಡೆ ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದರು.
ಶರೀಫ ನದಾಫ, ಪಬ್ಲಿಕ್ ನೆಕ್ಸ್ಟ್, ಬೈಲಹೊಂಗಲ
PublicNext
29/11/2024 04:36 pm