ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಶಾಸಕಿ ನಿಂಬಾಳ್ಕರ್ ಅವ್ರೆ ಬಿದ್ದ ಮನೆಗೆ ಪರಿಹಾರ ಕೊಡಿಸಿ ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ!

ಖಾನಾಪೂರ : ಹೌದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಯುವಕನೋರ್ವ ನನ ಮನೆಬಿದ್ದಿದ್ದ ಪರಿಹಾರ ಬರದ ಕಾರಣ ಆತ್ಮಹತ್ಯೆಗೆ ಶರಣಾಗುವುದಾಗಿ ವಿಡಿಯೋ ಹೇಳಿಕೆ ಮೂಲಕ ಬೆದರಿಕೆ ಹಾಕಿದ್ದಾನೆ.

ಅತಿಯಾದ ಮಳೆಯಿಂದಾಗಿ ನನ್ನ ಮನೆ ಬಿದ್ದು ೮ ತಿಂಗಳಾಗಿದೆ. ಈ ಕುರಿತಂತೆ ನಾನು ತಹಶೀಲ್ದಾರ್, ಡಿಸಿ, ಲೋಕಾಯುಕ್ತ, ಹಾಗೂ ಸಿಎಂ ರವರಿಗೂ ಈ ಕುರಿತು ನಾನು ಪತ್ರ ಬರೆದಿದ್ದೇನೆ. ಈ ಕುರಿತು ನಾನು ಶಾಸಕಿಯವರಾದ ಅಂಜಲಿ ನಿಂಬಾಳ್ಕರ್‌ರವರಿಗೂ ಪತ್ರ ಬರೆದಿದ್ದೇವೆ. ಇನ್ನೂ ಈ ಕುರಿತಂತೆ ನಾನು ಶಾಸಕಿಯವರೊಡನೆ ದೂರವಾಣಿಯ ಮೂಲಕ ಕೇಳಿದರೆ ಸರಕಾರ ಅನುದಾನ ನೀಡುತ್ತಿಲ್ಲ ಎನ್ನುತ್ತಿದ್ದಾರೆಂದು.

ನಿಮಗೆ ನಾವು ವೋಟ್ ಹಾಕಿದ್ದೇವೆ. ಒಂದು ಬಡ ಕುಟುಂಬಕ್ಕೆ ನ್ಯಾಯ ಕೊಡಿಸಲಾಗದಿದ್ದ ಮೇಲೆ ನೀವು ಶಾಸಕರಾಗಿ ಉಪಯೋಗವೇನು ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ಎಕ್ಕೇರಿ ಜಾತ್ರೆಯ ವೇಳೆಗೆ ನನ್ನ ಮನೆಗೆ ಪರಿಹಾರ ನೀಡದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಹೀಗೆ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ವೀಡಿಯೋ ಸಖತ್ ವೈರಲ್ ಆಗಿದೆ.

Edited By : Nagesh Gaonkar
PublicNext

PublicNext

24/09/2022 06:47 pm

Cinque Terre

34.95 K

Cinque Terre

0

ಸಂಬಂಧಿತ ಸುದ್ದಿ