ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪ್ರತ್ಯಕ್ಷವಾಗಿ ಮಾಯವಾಗುವ ನಾಗರ!- ಉರಗ ಸುತ್ತ 'ನಿಗೂಢತೆ ಹುತ್ತ'

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರು ನಾಗರ ಹಾವನ್ನು ದೈವೀ ಸ್ವರೂಪದಲ್ಲಿ ಕಾಣುತ್ತಾರೆ. ಆದರೆ, ಅದೊಂದು ಹಾವಿನಿಂದಾಗಿ ಇಡೀ ಊರಿಗೆ ಊರೇ ಆತಂಕಕ್ಕೆ ಒಳಗಾಗಿದ್ದು, ಆ ಹಾವು ದಿನಕ್ಕೆ ಒಬ್ಬರ ಮ‌‌ನೆಯಲ್ಲಿ ಪ್ರತ್ಯಕ್ಷವಾಗಿ ಮಾಯವಾಗುತ್ತಿದೆಯಂತೆ!

ಕಳೆದ 15 ದಿನಗಳಿಂದ ಬೇರೆ ಬೇರೆ ಮನೆಗಳಲ್ಲಿ ಪ್ರತ್ಯೇಕ್ಷವಾಗಿ ನಾಗರಹಾವೊಂದು ದಿಢೀರ್ ಮಾಯವಾಗ್ತಿದ್ದು, ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದ ಪೇಟ್‌ಗಲ್ಲಿಯಲ್ಲಿ ಈ ಪವಾಡ ಸದೃಶ ಘಟನೆ ನಡೆದಿದೆ.

ಇನ್ನು, ಗ್ರಾಮದಲ್ಲಿ ನಾಗರ ಹಾವಿನ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಉರಗ ತಜ್ಞರಿಗೆ ಸ್ಥಳೀಯರು ಮಾಹಿತಿ ನೀಡುತ್ತಾರೆ‌. ಗ್ರಾಮಕ್ಕೆ ಬಂದ ಉರಗ ತಜ್ಞರಿಗೆ ಎರಡ್ಮೂರು ದಿನಗಳ ಪ್ರಯತ್ನದ ಫಲವಾಗಿ ಹಾವು ಕೈಗೆ ಸಿಗುತ್ತದೆ. ಹೀಗೆ ಹಾವನ್ನು ರಕ್ಷಣೆ ಮಾಡಿ ಡಬ್ಬಿಯೊಂದರಲ್ಲಿ ಹಿಡಿದುಕೊಂಡು ಎರಡು ದಿನಗಳ ‌ಹಿಂದೆ ಉರಗ ತಜ್ಞ ಸಚಿನ್ ಚಿಂಗಳೆ ಎಂಬುವವರು ಹೋಗುತ್ತಾರೆ.

ಆದರೆ, ತಡರಾತ್ರಿ ವೇಳೆ ರಕ್ಷಣೆ ಮಾಡಿದ ಕಾರಣಕ್ಕೆ ಹಾವನ್ನು ಡಬ್ಬಿಯಲ್ಲಿಟ್ಟು, ಆ ಡಬ್ಬಿಯನ್ನು ತನ್ನ ಕಾರಲ್ಲಿಟ್ಟಿದ್ದರು. ಹಾವನ್ನು ಬೆಳಗ್ಗೆ ಕಾಡಿಗೆ ಬಿಟ್ಟರಾಯ್ತೆಂದು ಕಾರಲ್ಲೇ ಹಾವಿದ್ದ ಡಬ್ಬಿ ಇಟ್ಟು ಅದರ ಮೇಲೆ ಹ್ಯಾಂಡ್ ಬ್ರೇಕ್ ಹಾಕಿದ್ದಾರಂತೆ. ಆದರೆ, ಬೆಳಗ್ಗೆ ನೋಡುವಷ್ಟರಲ್ಲಿ ಡಬ್ಬಿಯಲ್ಲಿದ್ದ ನಾಗರ ಹಾವು ಮಾಯವಾಗಿದ್ದು, ಡಬ್ಬಿಯ ಬಾಯಿ ಓಪನ್ ಆಗಿದ್ದನ್ನು ನೋಡಿ ಉರಗ ತಜ್ಞ ಶಾಕ್ ಆಗಿದ್ದಾರೆ. ಇಡೀ ಕಾರು ತಡಕಾಡಿದರೂ 4 ಅಡಿ ಉದ್ದದ ನಾಗರ ಸಿಕ್ಕಿಲ್ಲ!

ಒಂದೂವರೆ ವರ್ಷದ ಹಿಂದೆಯೂ ಸ್ಥಳೀಯರಿಗೆ ಇದೇ ರೀತಿಯ ಸನ್ನಿವೇಶ ಎದುರಾಗಿತ್ತಂತೆ. ‌ಆಗಲೂ ಮನೆ, ಗಾರ್ಡನ್‌ಗಳಲ್ಲಿ ಪ್ರತ್ಯಕ್ಷವಾಗಿ ನಾಗರಹಾವು ಮಾಯವಾಗಿತ್ತಂತೆ. ಹೀಗಾಗಿ ಇದೊಂದು ದೇವರ ಹಾವು ಇರಬಹುದು ಎಂದು ಸ್ಥಳೀಯರು ಸುಮ್ಮನಾಗಿದ್ದರು. ಇದೀಗ ಮತ್ತೆ ಅಂಥದೇ ಸನ್ನಿವೇಶ ಸೃಷ್ಟಿಯಾಗಿದ್ದು, ಯಾವುದೇ ‌ಸಮಯದಲ್ಲಿ ನಾಗರ ಹಾವು ಪ್ರತ್ಯಕ್ಷವಾಗುವ ಆತಂಕದಲ್ಲಿದ್ದಾರೆ.

ಒಟ್ಟಾರೆ, ಇದು ದೈವೀ ಸ್ವರೂಪಿ ಹಾವೋ ಅಥವಾ ಕಾಕತಾಳೀಯ ಘಟನೆಯೋ ಎಂಬುದು ಗೊತ್ತಿಲ್ಲ. ಆದರೆ, ಗ್ರಾಮದ ಜನರು ಮಾತ್ರ "ನಾಗಶಕ್ತಿ"ಯನ್ನು ಕಣ್ಣಾರೆ ಕಂಡು, ಇದೊಂದು ದೈವಬಲ ಇರುವಂತಹ ಹಾವು ಎಂದು ನಂಬಿದ್ದಾರೆ.

-ಪ್ರಲ್ಹಾದ ಪೂಜಾರಿ, ಬೆಳಗಾವಿ

Edited By : Somashekar
PublicNext

PublicNext

06/12/2024 05:05 pm

Cinque Terre

23.99 K

Cinque Terre

0

ಸಂಬಂಧಿತ ಸುದ್ದಿ