ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಶಿಕ್ಷಕರು ನಿರಂತರ ತಾವು ಕಲಿಯುತ್ತಾ ಮಕ್ಕಳಿಗೂ ಕಲಿಸುತ್ತಿರಬೇಕು: ಡಿಡಿಪಿಐ

ಅಥಣಿ: ಶಿಕ್ಷಕರ ವೃತ್ತಿ ಎಲ್ಲ ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ಈ ವೃತ್ತಿಗೆ ಸಿಗುವ ಗೌರವ ಬೇರೆ ಯಾವುದೇ ವೃತ್ತಿಗೆಸಿಗಲು ಸಾಧ್ಯವಿಲ್ಲ. ವಿದ್ಯೆ ಕಲಿಸಿದ ಗುರುಗಳನ್ನು ವಿದ್ಯಾರ್ಥಿ ತನ್ನ ಜೀವನದ ಕೊನೆಯವರೆಗೂ ಮೆರೆಯುವುದಿಲ್ಲ. ಶಿಕ್ಷಕರಾದವರು ನಿರಂತರವಾಗಿ ತಾವು ಅಧ್ಯಯನ ಮಾಡುತ್ತಾ ಮಕ್ಕಳಿಗೆ ಕಲಿಸಬೇಕು. ನಿರಂತರ ಅಧ್ಯಯನದಿಂದ ಶಿಕ್ಷಕರಿಗೆ ಸಮಗ್ರ ಜ್ಞಾನ ಒದಗಲು ಕಾರಣವಾಗುತ್ತದೆಂದು ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟೆ ಹೇಳಿದರು.

ಅವರು ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಶ್ರೀ ಮಡ್ಡಿ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ನಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲಿ ಗಣಿತ ಶಿಕ್ಷಕರಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಾ ಶಿಕ್ಷಕರು ಗಣಿತ ವಿಷಯವನ್ನು ಮಕ್ಕಳು ಪ್ರೀತಿಯಿಂದ ಕಲಿಯುವಂತಹ ವಾತಾವರಣ ಶಾಲೆಯಲ್ಲಿ ನಿರ್ಮಾಣ ಮಾಡಬೇಕು. ಗಣಿತ ವಿಷಯ ಕಠಿಣ ಎಂಬ ಮನೋಭಾವವನ್ನು ಮಕ್ಕಳಲ್ಲಿ ಬರದ ಹಾಗೇ ನೋಡಿಕೊಳ್ಳಬೇಕು. ಸತತ ಪ್ರಯತ್ನ ಪಟ್ಟು ಮಕ್ಕಳು ಕಲಿಕೆಯಲ್ಲಿ ನಿರಂತರ ತೋಡಗುವಂತೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಅನಂತರ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ ಶಿಕ್ಷಕರಿಗೆ ಮುಂಬರುವ ದಿನಗಳಲ್ಲಿ ಎಲ್ಲ ವಿಷಯಗಳ ಕುರಿತು ಕಾರ್ಯಾಗಾರ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಶಿಕ್ಷಕರು ತಾವು ಕಲಿಸುತ್ತಿರುವ ವಿಷಯದಲ್ಲಿ ಪ್ರತಿ ದಿನವು ಹೊಸದನ್ನು ಕಲಿಯುವ ತಿಳಿಯುವ ಆಸಕ್ತಿ ಇರಬೇಕೆಂದು ಅವರು ಹೇಳಿದರು.

ಈ ವೇಳೆ ಜಿ.ಎ ಖೋತ, ಕೆ.ಜಿ ಕಾಂಬಳೆ, ಮಹಾಂತೇಶ ಕುಳ್ಳೋಳ್ಳಿ, ವಿ.ಎ. ಮಾಳಿ, ಅಕ್ಬರ ಮುಜಾವರ, ಎಸ್.ಕೆ. ಮಾಲಗಾಂವಿ, ಆಯ್. ಎಸ್. ಹಂಪಣ್ಣವರ, ಎಸ್.ಪಿ ಸನದಿ, ತುಕಾರಾಮ ಬಾಗೆನ್ನವರ, ನಾಗಪ್ಪ ಹುಗಾರೆ, ನಿಂಗಯ್ಯಾ ಹಿರೇಮಠ, ಶಿವಾನಂದ ಸಣಪೇಟೆ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

21/09/2022 11:03 am

Cinque Terre

65.02 K

Cinque Terre

0

ಸಂಬಂಧಿತ ಸುದ್ದಿ