ಬೈಲಹೊಂಗಲ : ಶಾಲಾ-ಕಾಲೇಜಿಗೆ ಹೋಗಲು ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸಮೀಪದ ಚಚಡಿ ಗ್ರಾಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಚಚಡಿ ಗ್ರಾಮದಿಂದ ದಿನನಿತ್ಯ 100 ರಿಂದ 120 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಆಗುತ್ತಿಲ್ಲ. ಶಾಲೆ ಬಿಟ್ಟ ನಂತರ ಮನೆಗೆ ಹೋಗುವುದಕ್ಕೆ ಕತ್ತಲಾಗುತ್ತಿದೆ. ಶೀಘ್ರ ಬೆಳಗ್ಗೆ ಹಾಗೂ ಸಂಜೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಅಗ್ರಹಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಡಿಪೋ ವ್ಯವಸ್ಥಾಪಕ ಹೊಸಮನಿ ಅವರನ್ನ ಸ್ಥಳಕ್ಕೆ ಕರೆಯಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಕಲ್ಪಿಸಲು ಆಗ್ರಹಿಸಿದರು.
ಸಾಗರ ಸಾವಳಗಿ,ಗಿರೀಶ ಆಲದಕಟ್ಟಿ, ಪ್ರಜ್ವಲ ಹಿರೇಮಠ, ಮೇಘಾ ಪೂಜೇರಿ, ಸ್ವಾತಿ ಕಲ್ಲಯ್ಯನವರ, ಸೌಮ್ಯ ಚಿನಗುಡಿ, ಸಂಜನಾ ಅಪ್ಪಣ್ಣವರ, ಶ್ವೇತಾ ಪೂಜೇರಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
.
PublicNext
12/12/2024 02:40 pm