ಬೆಂಗಳೂರು : ಬಿಬಿಎಂಪಿ ಚುನಾವಣಾ ಸಿದ್ದತೆಗೆ ಜನತಾ ಮಿತ್ರ ಕಾರ್ಯಕ್ರಮ ಜೆಡಿಎಸ್ ರೂಪಿಸಿದೆ.ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜನತಾ ಮಿತ್ರ ವಾಹನ ಸಂಚಾರ ಮಾಡ್ತಿದೆ.ಕುಮಾರಸ್ವಾಮಿ ಕನಸಿನ ಪಂಚರತ್ನ ಯೋಜನೆಯ ಬಗ್ಗೆ ಎಲ್ ಇ ಡಿ ವಾಹನಗಳ ಮೂಲಕ ಪ್ರಚಾರ ಜನತಾ ಮಿತ್ರ ವಾಹನಗಳು ಪ್ರಚಾರ ಮಾಡುತ್ತಿವೆ.ಅಲ್ಲದೇ ಬೆಂಗಳೂರು ಅಭಿವೃದ್ಧಿಗೆ ಜೆಡಿಎಸ್ ರೂಟ್ ಮ್ಯಾಪ್ ಜೆಡಿಎಸ್ ಹಾಕಿದೆ.
ಈಗ ಜನತಾಮಿತ್ರ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ಪ್ಲಾನ್ ಕೂಡ ಮಾಡ್ತಿದೆ.ರಾಜ್ಯದಲ್ಲಿ ಮಳೆ ಮತ್ತು ಹೆಚ್ ಡಿ ದೇವೆಗೌಡರ ಅನಾರೋಗ್ಯ ಉಂಟಾಗಿರುವುದರಿಂದ ಜನತಾ ಮಿತ್ರ ಸಮಾವೇಶ ಮುಂದೂಡಿಕೆಯಾಗಿದೆ.ಸದ್ಯ ಜನತಾಮಿತ್ರ ಸಮಾರೋಪ ಸಮಾರಂಭ ಸೆಪ್ಟೆಂಬರ್ 12 ರಂದು ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯುತ್ತಿದೆ.ಜನತಾ ಜಲಧಾರೆ ರೀತಿಯಲ್ಲಿ ಬೃಹತ್ ಕಾರ್ಯಕ್ರಮಕ್ಕೆ ದಳಪತಿಗಳು ಪ್ಲಾನ್ ಮಾಡಿದ್ದಾರೆ.
1 ಲಕ್ಷ ಜನ ಸೇರಿಸಲು ಬೆಂಗಳೂರು ನಾಯಕರಿಗೆ ಕುಮಾರಸ್ವಾಮಿ ಟಾಸ್ಕ್ ಕೊಟ್ಟಿದ್ದಾರೆ.ಈ ಮೂಲಕ ಬಿಬಿಎಂಪಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ.
Kshetra Samachara
04/09/2022 01:51 pm