ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊರಬಿತ್ತು ಬಿಬಿಎಂಪಿ ವಾರ್ಡ್ ಮೀಸಲಾತಿ: ಶುರುವಾಯ್ತು ಅತೃಪ್ತರಿಗೆ ಫಜೀತಿ

ವರದಿ - ಗಣೇಶ್ ಹೆಗಡೆ

ಬೆಂಗಳೂರು-ಬಿಬಿಎಂಪಿ ವಾರ್ಡ್ ಮೀಸಲಾತಿಯೇನೋ ಪ್ರಕಟವಾದಂತಿದೆ. ಆದ್ರೆ ಮೀಸಲಾತಿ ಮಾಡಿರೋ ವ್ಯವಸ್ಥೆ ಗಮನಿಸಿದ್ರೆ ಇದು ಪಕ್ಕಾ ಪೊಲಿಟಿಕಲ್ ಗೇಮ್ ಎಣಿಸದೇ ಇರೊಲ್ಲ. ಏಕೆಂದರೆ ಬಿಜೆಪಿ ಸರ್ಕಾರ ಪ್ರಜ್ಞಾಪೂರ್ವಕವಾಗೇ ಕ್ಲೀನ್ ಸ್ವೀಪ್ ಮಾಡಬಲ್ಲ ಹುರಿಯಾಳುಗಳಿಗೆ ಸ್ಪರ್ಧಿಸುವ ಅವಕಾಶವನ್ನೇ ತಪ್ಪಿಸಿದಂತಿದೆ.

ಮೀಸಲಾತಿ ನಿಗಧಿಯಲ್ಲಿ ಅನ್ಯಾಯ ನಡೆದಿದೆ ಎನ್ನುವ ಅಪಸ್ವರ ಭಾರೀ ಜೋರಾಗಿ ಕೇಳಿಬಂದಿರೋದ್ರಿಂದ ಬಹುತೇಕರು ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರೊಕ್ಕೆ ನಿರ್ಧರಿಸಿರುವುದಾಗಿ ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.

ಬಿಜೆಪಿ ಪಕ್ಷ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ನಡೆಯಬಹುದೆನ್ನಲಾಗುತ್ತಿರುವ ಬಿಬಿಎಂಪಿ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆನ್ನುವ ಉಮೇದಿನಲ್ಲಿ ತನಗಿಷ್ಟ ಬಂದಂತೆ ಮೀಸಲಾಗಿ ನಿಗಧಿ ಮಾಡಿದೆ ಎನ್ನುವ ಬಹುದೊಡ್ಡ ಆಪಾದನೆ ಕೇಳಿಬಂದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಈಸಿ ಕೇಕ್ ಆಗಿದ್ದ ವಾರ್ಡ್ ಗಳ ಮೀಸಲಾತಿಯನ್ನೇ ಬದಲಿಸಿ ಅವರಿಗೆ ಸ್ಪರ್ಧಿಸುವ ಅವಕಾಶವನ್ನೇ ತಪ್ಪಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೋಚರವಾಗುವ ಸತ್ಯ ಕೂಡ.

ಚುನಾವಣೆಗಳು ಶೀಘ್ರ ನಡೆಯಬೇಕೆಂದು ಯಾರ್ಯಾರು ಕೋರ್ಟ್ ಮಟ್ಟದಲ್ಲಿ ಹೋರಾಡುತ್ತಿದ್ದರೋ ಅವರಲ್ಲಿ ಬಹುತೇಕರಿಗೆ ಸ್ಪರ್ಧೆಗೆ ಅವಕಾಶವನ್ನೇ ನೀಡದೆ ಬಾಲ ಕಟ್ ಮಾಡಲಾಗಿದೆ.ಅವರಲ್ಲಿ ಪ್ರಮುಖರಾದವರು ಶಂಕರಮಠ ವಾರ್ಡ್ ನ ಕೈ ಅಭ್ಯರ್ಥಿ ಶಿವರಾಜು.ಎಂ. ಸಾಮಾನ್ಯ ವರ್ಗಕ್ಕಿದ್ದ ಮೀಸಲಾತಿಯನ್ನು ಕಿತ್ತಾಕಿ ಅಲ್ಲಿ ಎಸ್ ಸಿ ಕ್ಯಾಂಡಿಡೇಟ್ ನಿಲ್ಲಿಸೊ ವ್ಯವಸ್ಥೆ ಮಾಡಲಾಗಿದೆ.ಇದು ಸಚಿವ ಹಾಗೂ ಕ್ಷೇತ್ರ ಶಾಸಕ ಕೆ.ಗೋಪಾಲಯ್ಯ ಅವರ ರಾಜಕೀಯ ಚಾಣಾಕ್ಷ ನಡೆ ಎಂದೇ ಹೇಳಲಾಗ್ತಿದೆ.

ಹೆಬ್ಬಾಳದ ಮನೋರಾಯನಪಾಳ್ಯ ವಾರ್ಡ್ ನ ಅಬ್ದುಲ್ ವಾಜೀದ್ ಅವರಿಗೂ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ.ಆ ವಾರ್ಡನ್ನು ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಿರಿಸಲಾಗಿದೆ. ಹಾಗೆಯೇ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಹಲ್ ವಾರ್ಡ್ ನಿಂದ ಸ್ಪರ್ದಿಸುತ್ತಿದ್ದ ಗುಣಶೇಖರ್ ಗೆ ಸ್ಪರ್ಧಿಸುವ ಅವಕಾಶ ನಿರಾಕರಿಸ ಲಾಗಿದೆ.ಅವರ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.ಇನ್ನು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪರಮಾಪ್ತ ಮಡಿವಾಳ ವಾರ್ಡ್ ನ ಕಾಂಗ್ರೆಸ್ ಅಭ್ಯರ್ತಿ ಮಂಜುನಾಥ ರೆಡ್ಡಿ ವಾರ್ಡನ್ನುಸಾಮಾನ್ಯ ಮಹಿಳೆಗೆ ಮೀಸಲಿಸಲಾಗಿದೆ.

ಹಾಗೆಯೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್ ನಿಂದ ಸ್ಪರ್ದಿಸುತ್ತಿದ್ದ ಮಾಜಿ ಮೇಯರ್ ಪದ್ಮಾವತಿ ವಾರ್ಡ್ ಮೀಸಲಾತಿಯನ್ನು ಹಿಂದುಳಿದ ವರ್ಗ(ಎ)ಗೆ ಬದಲಿಸಲಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ನ ಮತ್ತೋರ್ವ ಕೈ ಅಭ್ಯರ್ಥಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್‌ಗೆ ವಾರ್ಡೇ ಇಲ್ಲದಂತೆ ಮಾಡಲಾಗಿದೆ. ಭೈರಸಂದ್ರ ವಾರ್ಡ್ ನಿಂದ ಸ್ಪರ್ದಿಸುವ ಆಸೆ ಇಟ್ಟುಕೊಂಡಿದ್ದ ನಾಗರಾಜ್ ಗೂ ಅವಕಾಶ ಇಲ್ಲದಂತಾಗಿದೆ. ಗುರಪ್ಪನ ಪಾಳ್ಯ ವಾರ್ಡ್ ನಿಂದ ಆಯ್ಕೆಯಾಗುತ್ತಿದ್ದ ಕೈ ಅಭ್ಯರ್ಥಿ ಮಹಮದ್ ರಿಜ್ವಾನ್ ಗೂ ಈ ಬಾರಿ ಟಿಕೆಟ್ ಇಲ್ಲದಂತಾಗಿದೆ.

ಇದು ಕೈ ಕಥೆಯಾದ್ರೆ ಬಿಜೆಪಿದು ಕೂಡ ಕರುಣಾಜನಕ ಕಥೆ..ಹಿರಿಯ ಸದಸ್ಯ ಪದ್ಮನಾಭ ರೆಡ್ಡಿ ಅವರಿಂದ ಕಾಚರಕನಹಳ್ಳಿ ವಾರ್ಡ್ ನ್ನೇ ಕಸಿದುಕೊಳ್ಳಲಾಗಿದೆ. ಸಾಮಾನ್ಯ ಮಹಿಳೆಗೆ ವಾರ್ಡ್ ಮೀಸಲಿಡಲಾಗಿದೆ.ಈ ಬಾರಿ ಗೆದ್ದಿದ್ರೆ ಪದ್ಮನಾಭ ರೆಡ್ಡಿ ಮೊದಲ ಮೇಯರ್ ಆಗುತ್ತಿದ್ದರೆಂದೇ ವಿಶ್ಲೇಷಿಸಲಾಗುತ್ತಿತ್ತು. ಆದ್ರೆ ಅವರಿಗೆ ಅದಕ್ಕೆ ಅವಕಾಶ ಮಾಡಿಕೊಡದೆ ಜೇಷ್ಠ್ಯತೆಯನ್ನೇ ಧಿಕ್ಕರಿಸಲಾಗಿದೆ.ಅದರಂತೆ ಬಸವನಗುಡಿ ವಾರ್ಡ್ ನ್ನೂ ಕೂಡ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರಿಗೆ ಇಲ್ಲವಾಗಿಸಿದೆ.ಆ ವಾರ್ಡ್ ಮೀಸಲಾತಿಯನ್ನೂ ಮಹಿಳೆಗೆ ಮೀಸಲಿಡಲಾಗಿದೆ.

ತನ್ನ ಮಗಗನ್ನು ಕಾರ್ಪೊರೇಷನ್ ಗೆ ಕಳುಹಿಸುವ ಆಸೆಯಲ್ಲಿದ್ದ ಕಟ್ಟೆ ಸತ್ಯನಾರಾಯಣ ಅವರ ಆಸೆಗೆ ತಣ್ಣೀರೆರಚಲಾಗಿದೆ. ಹಾಗೆಯೇ ಮತ್ತೋರ್ವ ಮಾಜಿ ಮೇಯರ್ ನಟರಾಜ್ ಗೂ ಈ ಬಾರಿ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಅವರೇನಿದ್ದರೂ ಜೆಪಿನಗರದಿಂದ ಸ್ಪರ್ಧಿಸಬೇಕಿದೆಯಷ್ಟೇ. ಹಾಗೆಯೇ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೋಗುಪಾಳ್ಯ ವಾರ್ಡ್‌ನಿಂದ ಮತ್ತೊಮ್ಮೆ ಸ್ಪರ್ಧಿಸುವ ಇರಾದೆ ಇಟ್ಟುಕೊಂಡಿದ್ದ ಮಾಜಿ ಮೇಯರ್ ಗೌತಮ್ ಕುಮಾರ್ ಗೂ ಈ ಬಾರಿ ಸ್ಪರ್ಧೆಗೆ ಅವಕಾಶ ಇಲ್ಲದಂತಾಗಿದೆ.ಅವರ ವಾರ್ಡ್ ನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

04/08/2022 01:52 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ