ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಯಾರಿಗೆ ತಾನೆ ಗೊತ್ತಿಲ್ಲ. ದರ್ಶನ್ ಗೆಳತಿ ಪವಿತ್ರಾಗೆ ಮೆಸೇಜ್ ಮಾಡಿದ ಅಂತ ದರ್ಶನ್ ಅಂಡ್ ರೇಣುಕಾಸ್ವಾಮಿ ಕೊಲೆ ಮಾಡಿದ್ರು ಅನ್ನೋ ಆರೋಪದ ಮೇಲೆ ಜೈಲು ಸೇರಿದ್ರು. ಯಲಹಂಕ ಡಬಲ್ ಮರ್ಡರ್ ಹಿಂದೆಯೂ ಇದೇ ಕಾರಣ ಕೇಳಿ ಬಂದಿದೆ. ಕೊಲೆಯಾದ ವ್ಯಕ್ತಿ ಆರೋಪಿ ಗೆಳತಿಗೆ ಮೆಸೇಜ್ ಮಾಡ್ತಿದ್ದ ಅನ್ನೋ ಕಾರಣ ಕೊಲೆ ಮಾಡಿದ್ದಾರೆ.
ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಗಳ ಹೆಸ್ರು ವಿಕ್ರಂ ಸಿಂಗ್ ಮತ್ತು ಚೋಟು ತೂರಿ. ಈ ಸ್ಟೋರಿಲಿ ಚೋಟು ತೂರಿ ಅಮಾಯಕ. ವಿಕ್ರಂ ಸಂಗಂ ಲವ್ ಮಾಡ್ತಿದ್ದ ಸುನಿತಾಳಿಗೆ ಮೆಸೇಜ್ ,ವಿಡಿಯೋ ಕಾಲ್ ಮಾಡ್ತಿದ್ನಂತೆ. ಈ ವಿಚಾರವನ್ನ ಸುನಿತಾ ಸಂಗಂ ಗೆ ತಿಳಿಸಿದ್ದಾಳೆ. ಇದ್ರಿಂದ ರೊಚ್ಚಿಗೆದ್ದ ಸಂಗಂ ತನ್ನ ಸ್ನೇಹಿತ ಸಮೀರ್ ನ ಕರ್ಕೊಂಡು ಸೀದಾ ವಿಕ್ರಂ ಇದ್ದ ಶೆಡ್ ಗೆ ಹೋಗಿದ್ದಾನೆ.
ಮೊದಲಿಗೆ ವಿಕ್ರಂ ಮೊಬೈಲ್ ನ ಚಚ್ಚಿ ಬಿಸಾಕಿದ್ದಾನೆ. ನಮ್ ಹುಡುಗಿಗೆ ಮೆಸೇಜ್ ಮಾಡ್ತಿಯಾ ಅಂತ ವಿಕ್ರಂ ಮೇಲೆ ಸಿಲಿಂಡರ್, ಕುಕ್ಕರ್, ಟೈಲ್ ಪೀಸ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. ಈ ವೆಳೆ ತಡೆಯಲು ಬಂದ ಚೋಟುತೂರಿ ಮೇಲೂ ಹಲ್ಲೆ ನಡೆಸಿದ್ದಾರೆ. ಸಂಗಂ ಏಟಿಗೆ ವಿಕ್ರಂ ಸಾವನ್ನಪ್ಪಿದ್ದ. ಇನ್ನೂ ಕೊಲೆ ನೋಡಿದ ಚೋಟು ತೂರಿ ಪೊಲೀಸ್ರ ಮುಂದೆ ಬಾಯಿ ಬಿಡ್ತಾನೆ ಅಂತ ಆತನನ್ನೂ ಕೊಲೆ ಮಾಡಿ ಎಸ್ಕೇಪ್ ಆಗಿದ್ರು.
ಇನ್ನೂ ಕೊಲೆ ಪ್ರಕರಣ ದಾಖಲಿಸಿಕೊಂಡ ಯಲಹಂಕ ನ್ಯೂಟೌನ್ ಇನ್ಸ್ಪೆಕ್ಟರ್ ಸುಧಾಕರ್ ರೆಡ್ಡಿ ಅಂಡ್ ಟೀಮ್ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ರು. ಇತ್ತ ಕೊಲೆ ಮಾಡಿ ದೆಹಲಿಗೆ ಎಸ್ಕೇಪ್ ಆಗಲು ರೈಲ್ವೆ ಸ್ಟೇಷನ್ ಸೇರಿದ್ದ ಆರೋಪಿಗಳನ್ನ ಯಲಹಂಕ ನ್ಯೂಟೌನ್ ಪೊಲೀಸ್ರು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಸುನಿತಾಳನ್ನ ವಿಚಾರಣೆ ನಡೆಸ್ತಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಲಾಕ್ ಆದಂತಹ ಸುನಿತಾಳು ಲಾಕ್ ಆಗೊ ಸಾಧ್ಯತೆಯಿದೆ.
PublicNext
12/12/2024 08:23 pm