ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೆಕ್ಕಿ ಆತ್ಮಹತ್ಯೆ ಪ್ರಕರಣ - ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ಜಡ್ಜ್​​ಗೆ ಮೇಲ್​​ ಮಾಡಿದ್ದ ಟೆಕ್ಕಿ

ಬೆಂಗಳೂರು: ಮಾರತ್ ಹಳ್ಳಿಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆ ವೇಳೆ ಅತುಲ್ ಸುಭಾಶ್ ಸಾವಿಗೂ ಮುನ್ನ ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್‌ಗೆ ಮೇಲ್ ಮಾಡಿ ತನಗಾಗಿರುವ ನೋವು, ಅನ್ಯಾಯವನ್ನು ಹೇಳಿಕೊಂಡಿದ್ದಾನೆ.

ನೇಣು ಹಾಕಿಕೊಳ್ಳುವ ಎರಡು ನಿಮಿಷಗಳ ಮುಂಚೆ ಅತುಲ್ ಸುಭಾಷ್ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ, ಸುಪ್ರೀಂ ಕೋರ್ಟ್ ಜಡ್ಜ್‌ಗೆ ಮೇಲ್ ಮಾಡಿದ್ದಾನೆ. ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷದ ವೇಳೆಗೆ ನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ. ಮನಸ್ಸು ಮಾಡಿದ್ರೆ ದೇಶದಲ್ಲಿ ಬದಲಾವಣೆ ತರ್ಬೋದು. ಅಸಮರ್ಥ ಮತ್ತು ಪಕ್ಷಪಾತಿ ನ್ಯಾಯಾಧೀಶರನ್ನು ವಜಾಗೊಳಿಸಬೇಕು ಎಂದು ಬರೆದು ಮೇಲ್‌ ಕಳುಹಿಸಿದ್ದಾನೆ. ಅಲ್ಲದೇ ತನ್ನ ಮೇಲೆ ಸುಳ್ಳು ಕೇಸ್, ಸೆಕ್ಷನ್‌ಗಳನ್ನು ಹಾಕಿದ್ದಾರೆಂದು ಎಂದು ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ರೀತಿಯ ಇ-ಮೇಲ್‌ವೊಂದನ್ನು ಸುಪ್ರೀಂ ಕೋರ್ಟ್ ಜಡ್ಜ್‌ಗೂ ಕಳುಹಿಸಿದ್ದಾರೆ. ತನಗೆ ಆಗಿರುವ ಅನ್ಯಾಯದ ಬಗ್ಗೆ ಮೇಲ್ ಮಾಡಿದ್ದಾನೆ.

Edited By : Vijay Kumar
PublicNext

PublicNext

12/12/2024 08:24 pm

Cinque Terre

12.36 K

Cinque Terre

0

ಸಂಬಂಧಿತ ಸುದ್ದಿ