ಬೆಂಗಳೂರು: ರೇಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಕೆಲಸ ಕೊಡಿಸುವುದಾಗಿ ಉಂಡೆನಾಮ ಹಾಕಿರೋ ವಂಚಕರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಮೊದಲಿಗೆ ಕೆಲಸ ಹುಡುಕೋ ಹುಡಗರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಕೆಲಸ ಕೊಡಿಸೋ ಆಮಿಷವೊಡ್ಡಿ ಆನ್‌ಲೈನ್ ಮೂಲಕ ನಕಲಿ ಅರ್ಡರ್ ಕಾಫಿ ಕೊಡ್ತಿದ್ರಂತೆ. ನಂತರ ನಂಬಿಕೆ ಗಳಿಸಲು ಮುಂಬೈನ ಒಂದು ಪ್ರದೇಶದಲ್ಲಿ ರೈಲ್ವೇ ಇಲಾಖೆ ಬೋರ್ಡ್ ಹಾಕೊಂಡು ನಕಲಿ ಟ್ರೈನಿಂಗ್ ಕೂಡ ಕೊಡ್ತಿದ್ರಂತೆ. ಇದೇ ರೀತಿ ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್ ಟ್ರೈನಿಂಗ್ ಕೂಡ ಕೊಡಿಸಿದ್ದಾರೆ. ಆರ್ಡರ್ ಕಾಪಿ ಹಿಡಿದುಕೊಂಡು ಕೆಲಸಕ್ಕೆ ಜಾಯಿನ್ ಆಗಲು ಹೋದಾಗ ವಂಚಕರ ಬಂಡವಾಳ ಬಯಲಾಗಿದೆ. ವಂಚನೆ ಬಗ್ಗೆ ವಿಜಯಪುರದ ಹುಸನಪ್ಪ ಮಾಡ್ಯಾಳ್ ಎಂಬುವರು ಸಿಸಿಬಿಗೆ 7 ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.
ವಿಜಯಪುರದ ಡಾ.ಲಕ್ಷ್ಮಿಕಾಂತ್ ಹೊಸಮನಿ, ಮುರುಳಿ, ಭೀಮರಾವ ಎಂಟಮನಿ, ಬಸು ಕಾಸಪ್ಪ, ಕೂಲಪ್ಪ ಸಿಂಗೆ, ಸಂತೋಷ್, ಶ್ರೀಧರ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ವಿಜಯಪುರದ ಹುಸನಪ್ಪ ಮಾಡ್ಯಾಳ್, ಶಿವಕುಮಾರ್, ಅಶೋಕ್ ಸೇರಿ ಕೆಲವರು ಮೊದಲಿಗೆ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಈ ವೇಳೆ ಕೆಲಸ ಮಾಡಿಸೋದಾಗಿ ನಂಬಿಸಿ ಒಬ್ಬೊಬರಿಂದ ಹಂತ ಹಂತವಾಗಿ 20 ರಿಂದ 25 ಲಕ್ಷ ಹಣ ಪಡೆದಿದ್ದಾರೆ.
ಬೆಂಗಳೂರು, ವಿಜಯಪುರ ಸೇರಿ ಹಲವು ಕಡೆ ಕರೆಸಿ ಆರೋಪಿಗಳು ಹಣ ಪಡೆದಿದ್ರು. ಹಣ ಪಡೆದುಕೊಂಡು ಆನ್‌ಲೈನ್ ಮೂಲಕ ನಕಲಿ ಆರ್ಡರ್ ಕಾಪಿ ಕೂಡ ಕೊಡ್ತಾರೆ. ಅದಾದ ನಂತರ ಮುಂಬೈ ಹಾಗೂ ಕಾನ್ಪುರದಲ್ಲಿ ಟ್ರೈನಿಂಗ್ ಕೂಡ ಕೊಡಿಸಿ ವಂಚಿಸಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆ ಸದ್ಯ ಸಿಸಿಬಿ ಪೊಲೀಸರು ಲಕ್ಷ್ಮೀಕಾಂತ್ ಹಾಗೂ ಮುರುಳಿ ಎಂಬುವರನ್ನ ಬಂಧಿಸಿ ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
PublicNext
12/12/2024 09:58 pm