ಬೆಂಗಳೂರು : ಅತ್ತ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಪ್ರತಿಭಟನೆ ನಡುವೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದರುರಾಗಿದೆ ಈ ಅಧಿವೇಶನದಲ್ಲೇ ಕಾಂತರಾಜು ಆಯೋಗದ ವರದಿ ಟೇಬಲ್ ಮಾಡಬೇಕು ಇಲ್ಲದಿದ್ರೆ 18ಕ್ಕೆ ಬೆಳಗಾವಿ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಎಚ್ಚರಿಸಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೊಷ್ಠಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿಡಿಎಸ್ಎಸ್ ಮಾವಳ್ಳಿ ಶಂಕರ್, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ಶೋಷಿತ ಸಮುದಾಯ ಪ್ರಧಾನ ಕಾರ್ಯದರ್ಶಿ ಎಣ್ಣಿಗೆರೆ ವೆಂಕಟರಾಮಯ್ಯ ಉಪಸ್ಥಿತಿರಿದ್ದರು. ಸುದ್ದಿಗೊಷ್ಠಿಯಲ್ಲಿಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುತ್ತಿರೋದನ್ನ ವಿರೋಧಿಸಿ ಹಾಗೂ ಈ ಅಧಿವೇಶನದಲ್ಲಿ ಕಾಂತರಾಜು ವರದಿಗೆ ಟೇಬಲ್ ಮಾಡಬೇಕು ಎಂದು ಆಗ್ರಹಿಸಿದರು.
ಡಿಎಸ್ ಎಸ್ ಮಾವಳ್ಳಿ ಶಂಕರ್ ಮಾತನಾಡಿ ಕಳೆದ ಮೂರು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹಾಕ್ತಿದ್ದೇವೆ.ಕಾಂತರಾಜು ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು.ವರದಿಯನ್ನ ಸಾರ್ವಜನಿಕ ಮುಕ್ತ ಮಾಡಬೇಕು.ಪ್ರಣಾಳಿಕೆಯಲ್ಲಿ ಕಾಂತರಾಜು ವರದಿ ಬಿಡುಗಡೆ ಮಾಡೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ರು.ಸಿಎಂ ಸಿದ್ದರಾಮಯ್ಯ ಗೆ ಇಚ್ಛಾಶಕ್ತಿ ಇದೆ, ಆದ್ರೆ ಅದನ್ನ ಮಾಡುತ್ತಿಲ್ಲ ಚಿತ್ರದುರ್ಗ ಸಮಾವೇಶದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದೆವು.ಸಿಎಂ ಹಾಗೂ ಸಚಿವ ಸಂಪುಟದ ಅನೇಕರು ಸಮಾವೇಶಕ್ಕೆ ಬಂದಿದ್ರು.
ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಲು ಬಂದಾಗ, ಪ್ರಭಲ ಸಮುದಾಯ ಶೋಷಣೆ ಮಾಡ್ತಿವೆ.
ಜನಗಣತಿಯಲ್ಲಿ ಜಾತಿಯನ್ನ ಪರಗಣಿಸುವಂತೆ ಚರ್ಚೆಯಾದಾಗ ಪ್ರಭಲ ಸಮುದಾಯಗಳು ಬಿಡಲಿಲ್ಲ.ಇಂದಿಗೂ ಜಾತಿ ಆಧಾರದ ಮೇಲೆ ಜನಗಣತಿ ಮಾಡಲು ಬಿಡುತ್ತಿಲ್ಲ.ಬಹುಸಂಖ್ಯಾತ ಹಿಂದೂಗಳು, ಹಿಂದೂಗಳ ವಿರೋಧ ಮಾಡೋದು ಸರಿಯಲ್ಲ, ನಾವು ಇವರ ಪಲ್ಲಕ್ಕಿ ಹೋರೋದಕ್ಕೆ ಮಾತ್ರ ಇದ್ದೇವಾ.?
ಮಂಡಲ್ ವರದಿಯೂ ಕೂಡ ಇದೆ.ಅಲೆಮಾರಿಗಳಾಗಿ ಇಂದಿಗೂ ಅನೇಕರು ಬದುಕುತ್ತಿದ್ದಾರೆ. ಮುಖ್ಯಮಂತ್ರಿಗಳು ಇನ್ನೂ ಮೀನಾಮೇಷ ಎಣಿಸುತ್ತಿದ್ದಾರೆ ಈ ಅಧಿವೇಶನದಲ್ಲೇ ಕಾಂತರಾಜು ಆಗೋಗದ ವರದಿ ಟೇಬಲ್ ಮಾಡಬೇಕು ಇಲ್ಲದಿದ್ರೆ 18ಕ್ಕೆ ಬೆಳಗಾವಿ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
Kshetra Samachara
12/12/2024 12:58 pm