ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮ ಅರ್ಚಕರ ಬಡಾವಣೆಯ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಿದರು.
ಸೂಲಿಕೆರೆ ಪಂಚಾಯತಿ ವ್ಯಾಪ್ತಿಯ ಹಲವಾರು ಬಡಾವಣೆಗಳಲ್ಲಿ 8ಕ್ಕೂ ಹೆಚ್ಚು ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಾಯಿತು. 80 ವಿಶೇಷ ಚೇತನರಿಗೆ ಸಹಾಯಧನ ವಿತರಿಸಲಾಯಿತು. 380 ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ, 11 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸಲಕರಣೆ, 1050 ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು. ಒಟ್ಟು 5 ಸಾವಿರ ಕುಟುಂಬಗಳಿಗೆ 10 ಸಾವಿರ ಕಸದ ಬುಟ್ಟಿ ವಿತರಿಸಿ ಮನೆ-ಮನೆ ಘನತ್ಯಾಜ್ಯ ಸಂಗ್ರಹ ಮಾಡಲಾಗ್ತಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಸಹಕಾರ ಸಚಿವರು, ಸೂಲಿಕೆರೆ ಗ್ರಾಮದ ಈ ಬೆಳವಣಿಗೆಗೆ ಇಲ್ಲಿನ ಪಿಡಿಒ ನಾಗರಾಜು ಕಾರಣ ಎಂದು ಶ್ಲಾಘಿಸಿದರು. ಇಲ್ಲಿ ಹಲವಾರು ಯೋಜನೆಗಳು ನಡೆಯುತ್ತಿವೆ. ಸ್ವಸಹಾಯ ಸಂಘಗಳಿಗೆ ಜೀರೊ ಪರ್ಸೆಂಟ್ ಲೋನ್ ಕೊಡಲಾಗ್ತಿದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಸಿ ಕೊಂಡವ್ರಿಗೆ ಹಕ್ಕುಪತ್ರ ಕೊಟ್ಟಿದ್ದೇವೆ. ಯಾರೂ ಸಹ ನಮ್ಮ ಕ್ಷೇತ್ರದಲ್ಲಿ ಸೌಲಭ್ಯ ವಂಚಿತರಾಗಬಾರದು ಎಂದರು.
ವರದಿ: ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
03/07/2022 09:03 pm