ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಂದ್ರು ಕೇಸ್ ಸಿಐಡಿಗೆ-ಗೃಹ ಸಚಿವರು ಏನ್ ಅಂತಾರೆ

ಬೆಂಗಳೂರು: ಚಂದ್ರು ಕೊಲೆ ತನಿಖೆಯನ್ನ ಸಿಐಡಿಗೆ ವರ್ಗಾಯಿಸಿದ್ದೇವೆ. ಹಾಗಂತ ನಮ್ಮ ಪೊಲೀಸರು ಅಸಮರ್ಥರು ಅಂತ ತಿಳಿಯ ಬೇಡಿ. ಸಿಐಡಿ ಕೂಡ ನಮ್ಮದೇ ಮತ್ತೊಂದು ವಿಭಾಗ. ಸಮಗ್ರ ತನಿಖೆ ಆಗಲೇಬೇಕು ಅನ್ನೋ ಕಾರಣಕ್ಕೇನೆ ಈ ಕೇಸ್ ಅನ್ನ ಸಿಐಡಿಗೆ ಕೊಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಚಂದ್ರು ಕೇಸ್ ಸಿಐಡಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಮಾತನಾಡಲಾಗಿದೆ. ಆ ಬಳಿಕವೇ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.

ಈ ಕೇಸ್ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಈ ಕೇಸ್ ಅನ್ನ ಸಿಐಡಿಗೆ ಕೊಡಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Edited By :
PublicNext

PublicNext

10/04/2022 11:27 am

Cinque Terre

46.74 K

Cinque Terre

1

ಸಂಬಂಧಿತ ಸುದ್ದಿ