ಬೆಂಗಳೂರು : ಸಚಿವ ಸಂಪುಟ ಪುನರ್ ರಚನೆ ವೇಳೆ ಬೆಂಗಳೂರು ಗ್ರಾಮಾಂತರ & ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿ ಬದಲಾವಣೆ ಅಗತ್ಯವಿಲ್ಲ ಎಂದು ಪೌರಾಡಳಿತ ಸಚಿವ MTB ನಾಗರಾಜ್ ದೇವನಹಳ್ಳಿಯಲ್ಲಿ ತಿಳಿಸಿದ್ದಾರೆ.
ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿಲಿ KDB ಮೀಟಿಂಗ್ ನಡೆಯಿತು. ಮೀಟಿಂಗ್ ನಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾ.ಪಂಚಾಯ್ತಿಯ ಹತ್ತಾರು ಹಳ್ಳಿಗಳಿಂದ KIADB ಹೆಸರಲ್ಲಿ ಈಗಾಗಲೇ ಸಾವಿರಾರು ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮತ್ತೆ 2ನೇ ಹಂತವಾಗಿ ಜಮೀನು ಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳಿಗೆ ಚನ್ನರಾಯಪಟ್ಟಣ ಸುತ್ತಮುತ್ತಲ ಗ್ರಾಮಸ್ಥರು ಧರಣಿ ಮತ್ತು ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಈ ಹಿನ್ನಲೆ ಇಂದಿನ ಮೀಟಿಂಗ್ ನಲ್ಲಿ ಜಿಲ್ಲಾ ಉಸ್ತುವಾರಿ ಡಾ.ಸುಧಾಕರ್, ಚಿಕ್ಕಬಳ್ಳಾಪುರ ಉಸ್ತುವಾರಿ MTB, AC, DC, ತಹಶೀಲ್ದಾರ್ ರು ಮೀಟಿಂಗ್ ನಡೆಸಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ.
ಇದೇ ವೇಳೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ ಇಬ್ಬರು ಒಟ್ಟಾಗಿರಲು ಈ ಅದಲು ಬದಲು ಸಹಕಾರಿಯಾಗಿದೆ. ನಾವೇನು ಬೀದರ್ ರಾಯಚೂರಿನಷ್ಟು ದೂರದಲ್ಲದ್ದೇವಾ.!? ಅಕ್ಕಪಕ್ಕದ ಜಿಲ್ಲೆಯವರಷ್ಟೆ ಎಂದು ಸಚಿವದ್ವಯರು ದೇವನಹಳ್ಳಿ ತಿಳಿಸಿದರು.
PublicNext
09/04/2022 08:32 am