ವರದಿ: ಗಣೇಶ್ ಹೆಗಡೆ
ಬೆಂಗಳೂರು: ಸ್ವಉದ್ಯೋಗಕ್ಕಾಗಿ ನೀಡಲಾಗುವ ಸಾಲ ಮಂಜೂರು ಮಾಡಲು ಹಿಂದೇಟು ಹಾಕ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮಂಗಳಮುಖಿಯರು ಕೆಂಡಾಮಂಡಲವಾಗಿದ್ದು, ಬಿಬಿಎಂಪಿ ಕೇಂದ್ರ ಕಚೇರಿಗೆ ಇಂದು ಮುತ್ತಿಗೆ ಹಾಕಿ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದಾರೆ.
ಬಿಬಿಎಂಪಿ ಬಜೆಟ್ ನಲ್ಲಿ 2 ಕೋಟಿ ಹಣವನ್ನು ತೃತೀಯ ಲಿಂಗಿಯರ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಸ್ವ ಉದ್ಯೋಗ ನಡೆಸಲು ಮಂಗಳಮುಖಿಯರಿಗೆ ಪಾಲಿಕೆ ಯಿಂದ 1.5 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತೆ.
ಈ ಸಂಬಂಧ ಅರ್ಜಿ ಸಲ್ಲಿ ಸಿರುವ ತೃತೀಯ ಲಿಂಗಿಯರು ವಿಲೇವಾರಿ ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪಾಲಿಕೆ ಕಚೇರಿ ಪ್ರವೇಶಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡ್ತಿರುವ ಮಂಗಳಮುಖಿಯರು ಮೂರು ವರ್ಷದಿಂದಲೂ ಪಾಲಿಕೆ ಅಲೆದು ಅಲೆದು ಸಾಕಾಗಿದೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
Kshetra Samachara
17/11/2021 06:22 pm