ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಮನೆಗೆ ಹೋಗಿಯೇ ಸಿಎಂ ಜನ ಸೇವೆ ಯೋಜನೆಗೆ ಚಾಲನೆ

ಬೆಂಗಳೂರು:ಸಿಂಪಲ್ ಸಿಎಂ ಬಸವರಾಜ್ ಬೊಮ್ಮಾಯಿ ಇವತ್ತು ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಮನೆ ಮನೆಗೆ ಸರ್ಕಾರದ ಜನ ಸೇವೆ ಅನ್ನೋ ಯೋಜನೆಯನ್ನ ಪ್ಯಾಲೆಸ್ ಗುಟ್ಟಳ್ಳಿಯ ಜನರ ಮನೆಗೆ ಹೋಗಿಯೇ ಚಾಲನೆ ಕೊಟ್ಟಿದ್ದಾರೆ.ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಕೂಡ ಸಿಎಂ ಗೆ ಸಾಥ್ ಕೊಟ್ಟಿದ್ದಾರೆ.

ಸರ್ಕಾರದ ಮನೆ ಮನೆ ಯೋಜನೆಯಲ್ಲಿ ಜನರಿಗೆ ತಲುಪಬೇಕಾದ ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್,ಉದ್ಯೋಗ ಕಾರ್ಡ್, ವಿಧವಾ ವೇತನ,ಪಹಣಿ,ಪಿಂಚಣಿ ಹೀಗೆ ಇವೆಲ್ಲವನ್ನೂ ಕೊಡಲಾಗುತ್ತದೆ. ಸಿಎಂ ಬಸವರಾಜ್ ಬೊಮ್ಮಾಯಿ ಇವತ್ತು ಆ ಕೆಲಸ ಮಾಡಿ ಹೊಸ ಯೋಜನಗೆ ಚಾಲನೆ ಕೊಟ್ಟಿದ್ದಾರೆ. ಇವರ ಈ ಕಾರ್ಯಕ್ಕೆ ಸಿಎಂ ಸೇರಿದಂತೆ ಸಚಿವ ಅಶ್ವಥ್ ನಾರಾಯಣ್ ಅವರಿಗೂ ಜನ ಇಲ್ಲಿ ಹೂ ಮಳೆ ಸುರಿಸಿ ಸ್ವಾಗತ ಕೋರಿದ್ದಾರೆ.

Edited By :
Kshetra Samachara

Kshetra Samachara

01/11/2021 04:16 pm

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ