ಬೆಂಗಳೂರು: ಕಾಂಗ್ರೆಸ್ ಅನ್ನ ಬಿಜೆಪಿ ಬೈದು ಹಾಕುತ್ತದೆ. ಬಿಜೆಪಿಯನ್ನ ಕಾಂಗ್ರೆಸ್ ಕಿಚಾಯಿಸುತ್ತದೆ. ಇದು ಲೋಕಲ್ ರಾಜಕೀಯದಲ್ಲಿಯೆ ಅತಿ ಹೆಚ್ಚು ಇರುತ್ತದೆ. ಅದರ ಮುಂದುವರೆದ ಭಾಗವಾಗಿಯೇ ಪ್ರಧಾನಿ ಮೋದಿಯನ್ನ ಈಗ ಕಾಂಗ್ರೆಸ್, ಶೋಕಿವಾಲಾ ಮೌನೇಂದ್ರ ಮೋದಿ ಅಂತ ಕಠುವಾಗಿಯೇ ಟೀಕಿಸಿದೆ.
ಕಾಂಗ್ರೆಸ್ ಈಗ ಮೋದಿಯನ್ನ ಮನಸೋಯಿಚ್ಛೆ ಟೀಕಿಸುತ್ತಿದೆ.ಇನ್ನಿಲ್ಲದ ಪದಗಳನ್ನ ಬಳಸಿ ಚುಚ್ಚುತ್ತಿದೆ.ಬಟ್ಟೆ ಶೋಕಿ-ಬಿಟ್ಟಿ ಪ್ರಚಾರ.ಸುಳ್ಳಿನ ಭಾಷಣವೇ ಮೋದಿ ಬಂಡವಾಳ.ದೇಶದ ಜನರನ್ನ ಭಿಕ್ಷುಕರನ್ನಾಗಿ ಮಾಡಿದ್ದಾರೆ ಮೋದಿ ಅಂತಲೇ ತನ್ನ ಅಧಿಕೃತ ಟ್ವಿಟರ್ ಪೇಜ್ ಅಲ್ಲಿಯೇ ಟೀಕಿಸಿದೆ ಕಾಂಗ್ರೆಸ್.
ಮೋದಿ ತಮ್ಮ ಹೆಸರನ್ನ ಮೌನೇಂದ್ರ ಮೋದಿ ಅಂತಲೇ ಇಟ್ಟುಕೊಳ್ಳಬೇಕು. ಯಾಕೆಂದ್ರೆ,ಬೆಲೆ ಏರಿಕೆ ಬಗ್ಗೆ ಮೌನ.ಕಾಶ್ಮೀರ ದಳ್ಳುರಿ ಬಗ್ಗೆ ಮೌನ. ರೈತರ ಹತ್ಯೆ-ಮೌನ.ಅದಾನಿ ಡ್ರಗ್ಸ್ ಕೇಸ್ ಗೂ ಮೌನ. ನಿರುದ್ಯೋಗಿಳ ಬಗ್ಗೆ ಅದಕ್ಕೂ ಮೌನ. ಯಾಕೆ
ಈ ಮೌನ ಅನ್ನೋದನ್ನ ಹೀಗೆ ಕೇಳಿದ ಕಾಂಗ್ರೆಸ್ ಪಕ್ಷ.
ಇಷ್ಟೆಲ್ಲ ಟೀಕೆಗೆ ಕಾರಣ ಮೊನ್ನೆ ಬಿಜೆಪಿ ಟ್ವಿಟರ್ ಪೇಜ್ ಅಲ್ಲಿ ಕಾಂಗ್ರೆಸ್ ಪಕ್ಷವನ್ನ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಏನ್ ಮಾಯವೋ. ಹಳ್ಳ ಇದ್ದಲ್ಲಿ ನೀರು ಬರೋದು. ಕಾಂಗ್ರೆಸ್ ಬಳಿ ಭ್ರಷ್ಟರು ಬರೋದು.ಡಿಕೆಶಿ ಎಲ್ಲಿ ಇರುತ್ತಾರೋ ಅಲ್ಲಿ ಭ್ರಷ್ಟಾಚಾರ ಇರುತ್ತದೆ. ಬೇರೆ ಬೇರೆ ರಾಜ್ಯದಲ್ಲಿ ನಡೆದ ಅವ್ಯವಹಾರಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪಾಲೆಷ್ಟು ಹೀಗೆ ಎಲ್ಲವೂ ಇಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್, ಅದೇನು ಮಾಯವೋ, ಅತ್ಯಾಚಾರಿ ಬಾ ಬಾಗಳು, ಡ್ರಗ್ಸ್ ದಂಧೆಕೋರರು,ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲ ಹಗರಣದಲ್ಲಿ ಈ ಹೆಬ್ಬೆಟ್ಟ ಗಿರಾಕಿ ಮೋದಿಯ ಪಾಲೆಷ್ಟು ಎಂದು ಪ್ರಶ್ನಿಸಿ ಟೀಕಿಸಿತ್ತು. ಎರಡೂ ಪಕ್ಷದ ಈ ಟೀಕಾ ಪ್ರಹಾರ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ.ಎರಡೂ ಪಕ್ಷಗಳು ಟ್ವಿಟರ್ ಅಲ್ಲಿ ಬಟಾಬಯಲಾಗುತ್ತಿವೆ.
Kshetra Samachara
18/10/2021 05:40 pm