ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು: ಭಾರತ್ ಗೌರವ್ ಯೋಜನೆಯ ಮೂಲಕ ರಾಜ್ಯದಿಂದ ಕಾಶಿಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ನೇರವಾಗಿ ಡಿ.ಬಿ.ಟಿ. ಮೂಲಕ ಆನ್ಲೈನ್ನಲ್ಲಿ ವರ್ಗಾಯಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾಶಿಯಾತ್ರೆಯ ಸಹಾಯಧನ ವಿತರಣೆ ಮತ್ತು ಯಾತ್ರೆಯ ಮುಂಗಡ ಬುಕಿಂಗ್ ಮಾಡುವ ವೆಬ್ಸೈಟ್ ಉದ್ಘಾಟನೆ ಮಾಡಿದರು. ಇದೇ ವೇಳೆ ಕಾಶಿಯಾತ್ರೆ ಮುಗಿಸಿ ಬಂದ ಯಾತ್ರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.ನಂತರ ಮಾತನಾಡಿದ ಸಿಎಂ, ಇದೊಂದು ಹೊಸ ಕಾರ್ಯಕ್ರಮ, ಇತ್ತೀಚೆಗೆ ಕಾಶಿಯನ್ನು ಪ್ರಧಾನಿ ಮೋದಿ ಸಂಪೂರ್ಣ ನವೀಕರಣ ಮಾಡಿದ್ದಾರೆ. ಇಷ್ಟು ವರ್ಷ ಕಾಶಿಗೆ ಯಾಕೆ ಬಂದೆವೋ ಎನ್ನಿಸುತ್ತಿತ್ತು. ಕಲುಷಿತ ನದಿ ದಂಡೆ, ಶುಚಿತ್ವವಿಲ್ಲದ ದೇವಾಲಯ ಆವರಣ, ಎಲ್ಲಾ ಕಡೆ ಅವ್ಯವಸ್ಥೆ ಇತ್ತು. ಆದರೆ ಈಗ ಎಲ್ಲ ಬದಲಾಗಿದೆ. ಘಾಟ್ಗಳನ್ನು ಸ್ವಚ್ಛ ಮಾಡಲಾಗಿದೆ. ಕಾಶಿ ಕಾರಿಡಾರ್ ಮಾಡಿದ್ದಾರೆ, ನದಿ ಸ್ವಚ್ಛವಾಗಿದೆ. ಕಾಶಿಯನ್ನು ನೋಡಿದರೆ ಭಕ್ತಿ ಭಾವ ಬರುವ ರೀತಿ ಪ್ರಧಾನಿ ಮೋದಿ ಬದಲಾಯಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಉಮಾ ಶಂಕರ್ ಉಪಸ್ಥಿತರಿದ್ದರು.
PublicNext
14/07/2022 08:35 pm