ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಜಾನ್ ಸದ್ದು. ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಶ್ರೀರಾಮ ಸೇನೆ. ಮೇ 9 ರಂದು ಬೆಳಿಗ್ಗೆ 5 ಗಂಟೆಗೆ ದೇವಾಲಯ ,ಮಠಗಳಲ್ಲಿ ಮೈಕ್ ಹಾಕಿ ಭಜನೆ, ಶ್ಲೋಕ ಹೇಳುವಂತೆ ಶ್ರೀರಾಮ ಸೇನೆ ಕರೆ.
ಹಿಂದೂ ಕಾರ್ಯಕರ್ತರಿಗೆ ಕರೆ ನೀಡಿದ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್, ದೇವಾಲಯ,ಮಠಗಳಲ್ಲಿ ಮೈಕ್ ಮೂಲಕ ಭಜನೆ, ಹನುಮಾನ್ ಚಾಲೀಸ್ ಹಾಕಲು ಸೂಚನೆ ನೀಡಿದ್ದು, ರಾಜ್ಯದ ಸುಮಾರು 100 ದೇವಸ್ಥಾನ, ಮಠಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಮೈಕ್ ನಲ್ಲಿ ಭಜನೆ ಹಾಡಲು ಸಿದ್ದವಾಗಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಯಾರಿ ನಡೆದಿದ್ದು, ಇನ್ನೂ ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಜನ ಜಾಗೃತಿ ಮೂಡಿಸಲಿದ್ದೇವೆ. ಶ್ರೀ ರಾಮಸೇನೆ ಕಾರ್ಯಕರ್ತರಿಂದ ಜನ ಜಾಗೃತಿ ಕಾರ್ಯಕ್ರಮ ಇದ್ದು, ಮೇ 9 ರಂದು ಬೆಳಿಗ್ಗೆ 5 ಗಂಟೆಗೆ ಮೈಕ್ ನಲ್ಲಿ ಭಜನೆ,ಶ್ಲೋಕ,ಹನುಮಾನ್ ಚಾಲೀಸ್ ಪಠಣೆ ಹಾಡಲು ಅಭಿಯಾನ ಮಾಡುತ್ತೇವೆ ಎಂದು ಮುತಾಲಿಕ್ ಹೇಳಿದರು.
ದೇವಸ್ಥಾನ, ಮಠಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.ನಮ್ಮನ್ನ ಸರ್ಕಾರ ತಡೆಯುವ ಕೆಲಸ ಮಾಡಿದ್ರೆ, ಮೊದಲು ಮಸೀದಿ ಮಂದಿರಗಳಲ್ಲಿ ಹಾಕಿರುವ ಮೈಕ್ ಅನ್ನ ತೆಗೆಸಿ ನಂತರ ನಮ್ಮ ಹೋರಾಟ ಕೈ ಬಿಡ್ತಿವಿ. ಸುಪ್ರೀಂ ಕೋರ್ಟ್ ಆದೇಶ ಇದ್ರು ಕೂಡ ಸರ್ಕಾರ ಮೈಕ್ ತೆಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಹೋರಾಟ ನಿಶ್ಚಿತವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
PublicNext
21/04/2022 04:25 pm