ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜೈನ್ ಸಮಾಜ ಪರೋಪಕಾರಿ ಸಮಾಜ - ಬೊಮ್ಮಾಯಿ

ಬೆಂಗಳೂರು : ಜೈನ್ ಸಮಾಜ ಪರೋಪಕಾರಿ ಹಾಗೂ ಸುಸಂಸ್ಕೃತ ಸಮಾಜವಾಗಿದ್ದು, ಇದರ ಮೂಲತತ್ವಗಳಾದ ಅಹಿಂಸೆ ಹಾಗೂ ಮಾನವೀಯ ಗುಣಗಳು ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಇಂದು ಇವರು ಬೆಂಗಳೂರಿನ ಆನಂದ ರಾವ್ ವೃತ್ತದ ಜೈನ್ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

ದೂರದ ರಾಜಸ್ಥಾನ ಹಾಗೂ ಗುಜರಾತಿನಿಂದ ಬಂದರೂ ಜೈನ್ ಸಮಾಜದ ಜನ ತಾವು ನೆಲೆಸಿದ ಊರಿನ ಜನರೊಂದಿಗೆ ಬೆರೆತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಾರೆ ಎಂದರು..

ಭಗವಾನ್ ಮಹಾವೀರರು ಸಾಮ್ರಾಜ್ಯವನ್ನಾಳಿದ ರಾಜರು. ಸಮಾಜದ ಕ್ಷೋಭೆ ಕಂಡು, ಸರ್ವಸ್ವ ಬಿಟ್ಟು, ಲೋಕಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಲು ತೀರ್ಮಾನಿಸುತ್ತಾರೆ. ತಮ್ಮ ಹೆಸರಿನಲ್ಲಿ ಏನೂ ಇರಬಾರದು ಎಂದು ತಮ್ಮದೆಲ್ಲ ತ್ಯಜಿಸುತ್ತಾರೆ.

ಈ ರೀತಿ ಸಂಸ್ಕೃತಿ ಅಪರೂಪದ್ದು. ಇರುವುದನ್ನು ತ್ಯಾಗ ಮಾಡಿ ಏನೂ ಇಲ್ಲದೆ ಬದುಕುವುದಕ್ಕೆ ವಿಶಾಲ ಹಾಗೂ ಸಹೃದಯ ಮನಸ್ಸು ಬೇಕೆಂದು ಅಭಿಪ್ರಾಯಪಟ್ಟರು.

ಜೈನ ಸಮಾಜ ರಾಜ್ಯದ ಬಗ್ಗೆ ಚಿಂತನೆ ಮಾಡಿದೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಆಡಳಿತ ಮಾಡುತ್ತೇವೆ ಎಂದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಜುಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

17/03/2022 08:26 am

Cinque Terre

3.61 K

Cinque Terre

0

ಸಂಬಂಧಿತ ಸುದ್ದಿ