ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ಡಾಂಬರೀಕರಣದಲ್ಲಿ ಗುಂಡಿ ಬಿದ್ರೆ ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ತಲೆದಂಡ: ಶಾಸಕ ಬಿ. ಶಿವಣ್ಣ

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೊಸೂರು ಮುಖ್ಯರಸ್ತೆಯಿಂದ ಹುಸ್ಕೂರು ಕಡೆಗೆ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಸ್ತೆಗೆ ನೂತನ ರಸ್ತೆ ಡಾಂಬರೀಕರಣಕ್ಕೆ ಶಾಸಕ ಬಿ ಶಿವಣ್ಣ ಚಾಲನೆ ನೀಡಿದರು. ಇನ್ನು ಹುಸ್ಕೂರ್ ಗ್ರಾಮದ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇನ್ನು ಈ ರಸ್ತೆ ಸಾಕಷ್ಟು ವರ್ಷಗಳಿಂದ ಮಳೆ ಬಂದಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ಅನಾನುಕೂಲ ಆಗುತ್ತಿದೆ ಅಂತ ಸಾಕಷ್ಟು ದೂರು ಕೇಳಿಬಂದಿತ್ತು. ಹೀಗಾಗಿ ಕೂಡ್ಲೇ ರಸ್ತೆ ಡಾಂಬರೀಕರಣ ಆಗುವಂತೆ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಜರುಸುವಂತೆ ಸೂಚನೆ ನೀಡಿದೆ 60 ಲಕ್ಷ ಅನುದಾನದಲ್ಲಿ ಈ ರಸ್ತೆ ಡಾಂಬರೀಕರಣ ಮುಗಿದಿದೆ. ಇನ್ನು ರಸ್ತೆ ಏನಾದರೂ ರಸ್ತೆ ಸಮಸ್ಯೆ ಆದರೆ ಇದಕ್ಕೆ ನೇರ ಹೊಣೆ, ಇಂಜಿನಿಯರ್ ಕಾಂಟ್ರಾಕ್ಟರ್ , ಶಾಸಕ ಬಿ ಶಿವಣ್ಣ ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಧಿಕಾರಿಗಳು ಭಾಗಿಯಾಗಿದ್ದರು

Edited By : PublicNext Desk
Kshetra Samachara

Kshetra Samachara

18/08/2022 07:27 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ