ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಾದಂತ ಸಂವಿಧಾನ ಸಂರಕ್ಷಣೆಗಾಗಿ ಜನ ಜಾಗೃತಿ ಜಾಥ

ಆನೇಕಲ್ : ಬಹು ಜನ ಸಮಾಜ ಪಾರ್ಟಿ ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ಜೈ ಭೀಮ್ ಜನ ಜಾಗೃತಿ ಜಾಥವನ್ನು ಇಡೀ ರಾಜ್ಯಾದಂತ ಹಮ್ಮಿಕೊಂಡಿದ್ದು ವಿಶೇಷವಾಗಿ ಆನೇಕಲ್ ಕ್ಷೇತ್ರದಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 10 ಗಂಟೆಗೆ ಇಂಡ್ಲವಾಡಿ ಗ್ರಾಮದಿಂದ ಆನೇಕಲ್ ಶ್ರೀ ರಾಮಕುಟೀರದ ವರೆಗೆ ಬೃಹತ್ ಬೈಕ್ ಜಾಥ ಹಮ್ಮಿಕೊಂಡಿದ್ದು ನಂತರ ಶ್ರೀರಾಮ ಕುಟೀರದ ಆವರಣದಲ್ಲಿ ಸಂವಿದಾನ ಸಂರಕ್ಷಣೆಗಾಗಿ ಬಹಿರಂಗ ಸಭೆ ಆಯೋಜಿಸಲಾಗಿದೆ ಇನ್ನು ಈ ಕಾರ್ಯಕ್ರಮದಲ್ಲಿ ಬಿಎಸ್ಪಿ ಪಕ್ಷದ ವರಿಷ್ಠರು ಆಗಮಿಸಲಿದ್ದು ಸಕಾಲಕ್ಕೆ ಆನೇಕಲ್ ಕ್ಷೇತ್ರದ ಜನತೆ ಮತ್ತು ಬಿಎಸ್ಪಿ ಪಕ್ಷದ ಎಲ್ಲಾ ಪದಾದಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನ ಜಾಗೃತಿ ಜಾಥ ವನ್ನು ಯಶಸ್ವಿಗೊಳಿಸುವಂತೆ ಬಿಎಸ್ಪಿ ಪಕ್ಷದ ಆನೇಕಲ್ ಕ್ಷೇತ್ರದ ಅಭ್ಯರ್ಥಿ ಡಾ ಚಿನ್ನಪ್ಪ ಚಿಕ್ಕಹಾಗಡೆ ರವರು ಸರ್ಜಾಪುರದ ಬಿಎಸ್ಪಿ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

28/09/2022 11:00 am

Cinque Terre

960

Cinque Terre

0

ಸಂಬಂಧಿತ ಸುದ್ದಿ