ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಭೂ ವ್ಯಾಜ್ಯ ಭ್ರಷ್ಟಾಚಾರ" ಜಿಲ್ಲಾಧಿಕಾರಿ ವರ್ಗಾವಣೆಗೆ ಕಾರಣ; ಸಚಿವ ಸೋಮಶೇಖರ್

ಬೆಂಗಳೂರು: ಹೌದು... ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ತೊಡಗಿದ್ದಾರೆ ಎನ್ನುವ ಆರೋಪದ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಈ ಭಾಗದಲ್ಲಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗುತ್ತೆ. ಈಗಾಗ್ಲೇ ನಮ್ಮ ಮುಂದೆ ಅಂತಹ ಉದಾರಣೆ ಇದೆ. 5 ಲಕ್ಷ ಲಂಚ ಪಡೆದದ್ದಕ್ಕೆ ಜಿಲ್ಲಾಧಿಕಾರಿ ವರ್ಗಾವಣೆಯಾಗಿದ್ದಾರೆ.

ಇಲ್ಲಿರುವ ಲೇಡಿ ಪಿಡಿಒ, ಅಂಗನವಾಡಿ ಟೀಚರ್ ಅವರನ್ನು ಒಂದು ಗಂಟೆ ಕಾಲ ನಿಲ್ಲಿಸಿ ಅವಮಾನ ಮಾಡಿದ್ದಾರೆ. ಇದೆಲ್ಲವೂ ನನ್ನ ಗಮನಕ್ಕೆ ಬಂದಿದೆ. ಇಲ್ಲಿ‌ ಒಬ್ಬ ಬೆಂಗಳೂರು ದಕ್ಷಿಣ ಜಿಲ್ಲಾ ತಹಶೀಲ್ದಾರ್ ಕೂಡ ಇದೆ ರೀತಿ ನಡೆದುಕೊಳ್ತಿದ್ದಾರೆ. ಅಂತಹ ಅಯೋಗ್ಯರಿಗೆ ಇಷ್ಟರಲ್ಲೇ ತಕ್ಕ ಶಿಕ್ಷೆ ಆಗುತ್ತೆ.

ನಾನು ಈಗಾಗ್ಲೇ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಆತನ ವರ್ತನೆ ಇದೇ ರೀತಿ‌ ಮುಂದುವರೆದು ಜನಸಾಮಾನ್ಯರ ಹತ್ತಿರ ಹಣ ಕಿತ್ತು ತಿನ್ನುತಿದ್ರೆ ಕಥೆ ಬೇರೆನೇ ಇರುತ್ತೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ತಹಶೀಲ್ದಾರ್ ರಾಮಲಕ್ಷಣಗೆ ಎಚ್ಚರಿಕೆ ನೀಡಿದರು. ಯಶವಂತಪುರ ಕ್ಷೇತ್ರದಲ್ಲಿ ಏನೇ ಆದ್ರೂ ನನ್ನ ಗಮನಕ್ಕೆ ಬರುತ್ತೆ ಎಂದರು.‌

ವರದಿ: ರಂಜಿತಾ ಸುನಿಲ್ 'ಪಬ್ಲಿಕ್‌ ನೆಕ್ಸ್ಟ್‌ʼ ಬೆಂಗಳೂರು

Edited By : Somashekar
PublicNext

PublicNext

03/07/2022 09:07 pm

Cinque Terre

65.86 K

Cinque Terre

0

ಸಂಬಂಧಿತ ಸುದ್ದಿ