ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ, ಒಮಿಕ್ರಾನ್ ಅಂತ ಹೊಸ ಮಾರ್ಗಸೂಚಿ, ನೈಟ್ ಕರ್ಫ್ಯೂ ಅಂತ ಒಂದಿಲ್ಲೊಂದು ನಿಯಮಾವಳಿ ಜಾರಿಗೆ ತರ್ತಿದೆ. ಅದು ಜನ್ರಿಗೆ ಮಾತ್ರ ಸೀಮಿತ, ಜಾರಿಗೆ ತಂದ ಸರ್ಕಾರಕ್ಕಲ್ಲ! ರಾಜಕೀಯ ನಾಯಕರಿಗಂತೂ ಅಲ್ಲವೇ ಅಲ್ಲ... ಇದೇನಪ್ಪಾ ಹೀಗೇಳ್ತಿದ್ದೀನಿ ಅಂತೀರಾ ನೀವೇ ನೋಡಿ...
ಹೌದು, ಸರ್ಕಾರ ಹೊಸ ವರ್ಷಾಚರಣೆಗೆ ಹಲವು ನಿಯಮ ತಂದು ಜನ್ರ ಸಂಭ್ರಮಾಚರಣೆಗೂ ತಣ್ಣೀರೆರಚಿ ಬ್ರೇಕ್ ಹಾಕಿದ್ರು. ಆದ್ರೆ, ಈಗ ಬಿಜೆಪಿ ಮುಖಂಡರೊಬ್ಬರು ನೈಟ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಈ ಘಟನೆ ನಡೆದದ್ದು ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ.
ಡಿ.12ರಂದು ಟಿ.ದಾಸರಹಳ್ಳಿ ಮಾಜಿ ಶಾಸಕ ಬಿಜೆಪಿಯ ಎಸ್. ಮುನಿರಾಜು ಹುಟ್ಟುಹಬ್ಬ ನಡೆಯಬೇಕಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಮುಂದೂಡಿ ಶನಿವಾರ ಜನವರಿ 1 ರಂದು ರಾತ್ರಿ ಚೊಕ್ಕಸಂದ್ರ ವಾರ್ಡ್ ನಲ್ಲಿ ಬಿಜೆಪಿ ಮುಖಂಡ ಸಿ.ಎಂ. ನಾಗರಾಜು ನೇತೃತ್ವದಲ್ಲಿ "ಅಭಿಮಾನೋತ್ಸವ" ಆಯೋಜಿಸಲಾಗಿತ್ತು.
ತಮ್ಮ ನೆಚ್ಚಿನ ನಾಯಕ ಮುನಿರಾಜು ಅವರಿಂದ ಕೇಕ್ ಕತ್ತರಿಸಿ, ಹೂಮಳೆಗೆರೆದು, ಸೇಬಿನ ಹಾರ ಹಾಕಿ ನೂರಾರು ಕಾರ್ಯಕರ್ತರು ಸಂಭ್ರಮಿಸಿದರು. ಇಲ್ಲಿ 500-600ಕ್ಕೂ ಹೆಚ್ಚು ಕಾರ್ಯಕರ್ತರು, ಸ್ಥಳೀಯ ಜನ್ರು ಭಾಗಿಯಾಗಿದ್ರು.
ಇವರಿಗೆಲ್ಲ ಬಿರಿಯಾನಿ, ಪಾಯಸ ಹಂಚಿಕೆ ಮಾಡುವಾಗ ಜನ್ರು ಮುಗಿ ಬಿದ್ದೇ ಬಿಟ್ರು.
ಈ ವೇಳೆ ಯಾರೂ ಕೂಡ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವೂ ಇಲ್ಲದೆ ಬಿಟ್ಟಿ ಬಿರಿಯಾನಿಗಾಗಿ "ಹೋರಾಟʼ ಆರಂಭಿಸಿದ್ರು. ಒಟ್ಟಾರೆ ಬಿಜೆಪಿ ಸರ್ಕಾರದ ಈ ಟಪ್ ರೂಲ್ಸ್ ಗೆ ಬಿಜೆಪಿ ನಾಯಕರೇ ಕ್ಯಾರೇ ಎನ್ನದಿರುವಾಗ, ಇನ್ನು ಸಾಮಾನ್ಯ ಜನ್ರು ರೂಲ್ಸ್ ಫಾಲೋ ಮಾಡಬೇಕಾ ಅನ್ನೋ ಮಾತು, ಪ್ರಶ್ನೆ ಕೇಳಿ ಬಂತು.
PublicNext
02/01/2022 11:51 am