ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಮ್ ಆದ್ಮಿ ಕಾರ್ಯಕರ್ತರಿಂದ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ ಪ್ರತಿಭಟನೆ

ಬೆಂಗಳೂರು: ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು. ಮೊನ್ನೆ ಸುರಿದ ಭಾರಿ ಮಳೆಗೆ ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ಎಚ್ಎಸ್ಆರ್ ಲೇಔಟ್ ಸ್ಟೇಡಿಯಂನ ಗ್ಯಾಲರಿ ಮುರಿದುಬಿದ್ದಿತ್ತು. ಇದರ ವಿಚಾರವಾಗಿ ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಿಬಿಎಂಪಿ ಮತ್ತು ಕಾಂಟ್ರಾಕ್ಟರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

40% ಸರ್ಕಾರದಿಂದಲೇ ಘಟನೆಯಾಗಿದೆ ಎಂದು ಆಪ್ ಕಾರ್ಯಕರ್ತರು ಕಿಡಿಕಾರಿದರು. 40 ಪರ್ಸೆಂಟ್ ಕಮಿಷನ್‌ನಿಂದ ಕಾಮಗಾರಿಯು ಕಳಪೆ ಮಟ್ಟದಲ್ಲಿ ಆಗಿದ್ದು ಇದರಿಂದ ಸ್ಟೇಡಿಯಂನ ಗ್ಯಾಲರಿ ಕುಸಿದು ಬಿತ್ತು ಎಂದು ಆಪ್ ಕಾರ್ಯಕರ್ತರು ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಆಪ್ ಕಾರ್ಯಕರ್ತರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಂದು ಆಪ್ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿ ಸೂಕ್ತ ತನಿಖೆ ಮಾಡಬೇಕು ಮತ್ತು ಕಾಂಟ್ರಾಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದರು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
Kshetra Samachara

Kshetra Samachara

10/05/2022 07:36 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ