ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೌಕರರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ರೂ ಚುನಾವಣೆಗೆ ಮುಂದಾದ ಬಿಎಂಆರ್ ಸಿಎಲ್?

ಬೆಂಗಳೂರು : ರಾಜಧಾನಿ ಬೆಂಗಳೂರು ಕೋವಿಡ್ ಹಾಟ್ ಸ್ಪಾಟ್ ಗಳಾಗಿ ಮಾರ್ಪಟ್ಟಿದೆ. ಕೋವಿಡ್ ಕೇಸ್ ಗಳು 20 ಸಾವಿರ ಗಡಿ ದಾಟಿವೆ. ಇದರ ನಡುವೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನೌಕರರಿಗೆ ಎಲೆಕ್ಷನ್ ಚಿಂತೆ. ನಾಳೆ ಬಿಎಂಆರ್ ಸಿ ಎಲ್ ನೌಕರರ ಸಂಘದ ಚುನಾವಣೆ ಜರುಗಲಿದೆ. ಈ ಸಮಯದಲ್ಲಿ ಚುನಾವಣೆ, ಪ್ರಚಾರ ಸಭೆ ಸಮಾರಂಭಗಳು ಬೇಕಿತ್ತಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರ್ತಿದೆ.

ವಿಪರ್ಯಾಸವೆಂದರೆ ಬಿಎಂಆರ್ ಸಿ ಎಲ್ ನಲ್ಲೇ ಕೋವಿಡ್ ಪ್ರಕರಣ ಗಳು ನೌಕರರಲ್ಲಿ ಹೆಚ್ಚಾಗಿ ಕಂಡು ಬಂದಿದೆ.‌ಈ ಸಂಬಂಧ ಸಾರ್ವ ಜನಿಕರ ಪ್ರವೇಶಕ್ಕೂ ಸದ್ಯ ಅವಕಾಶ ನಿರಾಕರಿಸಲಾಗಿದೆ. ಇದರ ನಡುವೆ ಚುನಾವಣೆ ನಡೆಸು ತ್ತಿರೋದು ವಿವಾದ‌ ಮೈಮೇಲೆ ಎಳೆದುಕೊಂಡಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

19/01/2022 03:31 pm

Cinque Terre

208

Cinque Terre

0

ಸಂಬಂಧಿತ ಸುದ್ದಿ