ಬೆಂಗಳೂರು: ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಅಂತಹ ರೈನ್ಬೋ ಡ್ರೈವ್ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ ಜಾಗವನ್ನು ತೆರವು ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ಫೇಲ್ ಆಗಿದ್ದಾರೆ. ಬಿಬಿಎಂಪಿಯ ದರ್ಪ ಬರೀ ಬಡವರ ಮತ್ತು ಮಧ್ಯಮ ವರ್ಗದ ಮನೆಗಳ ಮೇಲೆ ಅಷ್ಟೇ. ಯಾಕಂದ್ರೆ ಮೂರು ದಿನ ಅಬ್ಬರಿಸಿ ಬೊಬ್ಬಿರಿದ ಬಿಬಿಎಂಪಿ ಜೆಸಿಬಿ ಗಳು ಇಂದು ನಾಪತ್ತೆಯಾಗಿತ್ತು. ಮತ್ತು ಅಧಿಕಾರಿಗಳು ಎಂದಿನಂತೆ ಒಂದುವಾರದಿಂದ ಬರೀ ಸರ್ವೆ ಮಾಡಿಕೊಂಡು ಹೋಗುತ್ತಿದ್ದಾರೆ.
ಬಡವರ ಮನೆಗೆ ಯಾವುದೇ ನೋಟಿಸ್ ನೀಡದೆ ಬಿಬಿಎಂಪಿ ಮನೆಗಳನ್ನು ಉರುಳಿಸಿದ್ದರು ಆದರೆ ಕೋಟಿ ಕೋಟಿ ವಿಲ್ಲಾಗಳಿಗೆ ಒಂದು ವಾರದ ನೋಟಿಸ್ ನೀಡಿ ಸೈಲೆಂಟಾಗಿ ಇದ್ದರೂ ಒಂದು ವಾರ ಕಾಲ ಮುಗಿಯುತ್ತಿದ್ದಂತೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಪ್ರತಿನಿಧಿ ಸರ್ಜಾಪುರ ರಸ್ತೆಯ ರೈನ್ಬೋ ಡ್ರೈವ್ ಲೇಔಟ್ ನಿಂದ ನೀಡಿರುವ ವರದಿ ಇಲ್ಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
19/09/2022 08:31 pm