ವಿಶೇಷ ವರದಿ --ಪ್ರವೀಣ ನಾರಾಯಣ ರಾವ್
ಬೆಂಗಳೂರು: ಮಳೆಗೆ ತತ್ತರಿಸಿ ಹೋಗಿರುವ ಬೆಂಗಳೂರಿನ ಇವತ್ತಿನ ಸ್ಥಿತಿಗೆ ಅಕ್ರಮವಾಗಿ ಕೆರೆ- ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ..
ಕೆಂಪೇಗೌಡ ಮಹಾರಾಜರು ಅತ್ಯಂತ ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಕಟ್ಟಿದ್ದ ಬೆಂಗಳೂರನ್ನು ರಾಜ್ಯದ ಹೊರಭಾಗಗಳಿಂದ ಬಂದ ವಲಸಿಗರು ಆಕ್ರಮಿಸಿಕೊಂಡು ಇಡೀ ನಗರದ ಕೆರೆಗಳನ್ನು,ರಾಜಾಕಾಲುವೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಪಾಟ್೯ಮೆಂಟ್ ಗಳನ್ನು ಕಟ್ಟಿದ್ದರ ಪರಿಣಾಮವನ್ನು ಇವತ್ತು ಇಡೀ ಬೆಂಗಳೂರು ಅನುಭವಿಸುವಂತಾಗಿದೆ ಅನ್ನುವ ಚರ್ಚೆ ಶುರುವಾಗಿದೆ..
ಇದರ ಬೆನ್ನಲ್ಲೇ ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶ, ಬೆಂಗಳೂರಿನ ಹೃದಯ ಭಾಗ ಎನಿಸಿಕೊಂಡಿರುವ ಚಿಕ್ಕಪೇಟೆಯ ತುಳಸಿತೋಟ ದಲ್ಲಿರುವ ಪುರಾತನ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ 80ಕೋಟಿ ಮೌಲ್ಯದ ಭೂಮಿಯನ್ನು ಒತ್ತುವರಿ ತೆರವುಗೊಳಿಸಲಾಗುತ್ತಿದೆ..
ಇದರ ಕುರಿತ ವರದಿ ಇಲ್ಲಿದೆ.
PublicNext
07/09/2022 07:18 pm