ಬೆಂಗಳೂರು: 15 ನೇ ವಿಧಾನಸಭೆಯ 13 ನೇ ಅಧಿವೇಶನದ ನಾಲ್ಕನೆಯ ದಿನವಾದ ಇಂದೂ ಸಹಿತ ಬೆಂಗಳೂರಿನ ಮಳೆ ಹಾನಿ ವಿಚಾರವೇ ಪ್ರಧಾನ ಚರ್ಚೆಯ ವಿಷಯವಾಗಿತ್ತು.. ನಿಯಮ 69 ಅಡಿ ಮಾತನಾಡಿದ
ಕಾಂಗ್ರೆಸ್ ನ ಹಿರಿಯ ಸದಸ್ಯ ರಾಮಲಿಂಗರೆಡ್ಡಿ ಅವರು
ಈಗ ಬೆಂಗಳೂರಿನಲ್ಲಿ ಎಲ್ಲಾ ರಸ್ತೆಗಳು ಹಾಳಾಗಿವೆ
ವಾರ್ಡ್ ರಸ್ತೆಗಳೇ ಅಲ್ಲಾ ಪ್ರಮುಖ ರಸ್ತೆಗಳು ಹಾಳಾಗಿವೆ
ಯಾರೋ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ
ಒಂದೂವರೆ ವರ್ಷದಿಂದ ಹೈಕೋರ್ಟ್ ಮಾನಿಟರ್ ಮಾಡುತ್ತಿದೆ
ಪ್ರತಿ ವಾರ ಹೈಕೋರ್ಟ್ ಮಾನಿಟರ್ ಮಾಡುತ್ತಿದೆ
ಕಮಿಷನರ್ ಹಾಗೂ ಚೀಫ್ ಇಂಜಿನಿಯರ್ ಕರೆಸುತ್ತಾರೆ
ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಾರೆ
ರಸ್ತೆಗುಂಡಿಯಿಂದ
ಒಂದೂವರೆ ವರ್ಷಗಳಿಂದ 15 ಜನ ಸತ್ತಿದ್ದಾರೆ
ಪ್ರಮುಖ ರಸ್ತೆಗಳಿಗೆ ಆದ್ಯತೆ ನೀಡಬೇಕು
ಇದಕ್ಕೆ ಪ್ರತ್ಯೇಕ ಅನುದಾನ ನೀಡಬೇಕು
ಒಟ್ಟು 12 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ನೀಡಿದ್ದರು
ಈ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ 1365 ಕೋಟಿ ಅನುದಾನ ಮಾತ್ರ ಅನುದಾನ ನೀಡಿದೆ
ಆದರೆ, ಬಿಜೆಪಿ ಶಾಸಕರಿಗೆ 9 ಸಾವಿರ ಕೋಟಿ ಅನುದಾನ ಬೆಂಗಳೂರು ಅಭಿವೃದ್ಧಿಗೆ ಕೊಟ್ಟಿದೆ
45% ವ್ಯಾಪ್ತಿ ಇರುವ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಇಷ್ಟು ಅನುದಾನ ಕೊಟ್ರೆ ಬೆಂಗಳೂರು ಅಭಿವೃದ್ಧಿ ಹೇಗೆ ಆಗುತ್ತೆ? ಎಂದು ಪ್ರಶ್ನಿಸಿದ್ರು ಉಳಿದಂತೆ ಸದನದ ಕಲಾಪದ ಹೈ ಲೈಟ್ಸ್ ಇಲ್ಲಿದೆ....
ಪ್ರವೀಣ್ ರಾವ್
PublicNext
15/09/2022 08:09 pm