ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಂಡ್ಲವಾಡಿ ಕ್ರಾಸ್ ಬಳಿಯ ನಕ್ಷತ್ರ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಎದುರು ಇಂದು ನೂರಾರು ಜನರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದರು!
ಕಾರಣ... ಪಕ್ಕದಲ್ಲೇ ಇರುವ ಪೂಜಾ ಕ್ಲಿನಿಕ್ ನ '5 ರೂಪಾಯಿ ಡಾಕ್ಟರ್' ಸಿದ್ದು ಎಂಬವರು ಕಡಿಮೆ ಗುಣಮಟ್ಟದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಪೂಜಾ ಕ್ಲಿನಿಕ್ ಮುಚ್ಚುವಂತೆ ಆನೇಕಲ್ ವೈದ್ಯಾಧಿಕಾರಿಗೆ ʼನಕ್ಷತ್ರʼ ಆಸ್ಪತ್ರೆಯವರು ದೂರು ನೀಡಿದ್ದಾರೆ ಅಂತ ಗಂಭೀರ ಅರೋಪ ಕೇಳಿ ಬಂದಿದೆ. ಹೀಗಾಗಿ ʼಜನ ಮೆಚ್ಚಿದʼ ವೈದ್ಯ ಡಾ.ಸಿದ್ದು ಪರ ಬೆಂಬಲಿಗರು ಮುತ್ತಿಗೆ ಹಾಕಿದ್ದರು.
ಇನ್ನು, ಆನೇಕಲ್ ತಾಲೂಕು ವೈದ್ಯಾಧಿಕಾರಿ ವಿನಯ್ , ಆಯುರ್ವೇದಿಕ್ ವೈದ್ಯ ಡಾ. ಸಿದ್ದು ಅವರಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ 2 ದಿನ ಪೂಜಾ ಕ್ಲಿನಿಕ್ ಬಾಗಿಲು ತೆರೆಯದ ಕಾರಣ ಜನರಿಗೆ ಇದು ʼನಕ್ಷತ್ರʼ ಕೈವಾಡ ಎಂದು ತಿಳಿದಿದೆ. ಆದ್ದರಿಂದ ಮುತ್ತಿಗೆ ಹಾಕಿದ್ದಾರೆ.
ಈ ಬಗ್ಗೆ ನಕ್ಷತ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಡಾ. ಕಿರಣ್ ಮಾತನಾಡಿ, ನಾವು ಆರೋಪ ಮಾಡಿಲ್ಲ. ಆಯುಷ್ಮಾನ್ ವೈದ್ಯರು ಇಂಜೆಕ್ಷನ್, ಡ್ರೀಪ್ ಸೆಟ್ ಯಾವುದೇ ಕಾರಣಕ್ಕೂ ನೀಡುವಂತಿಲ್ಲ. ಅವರ ಟ್ರೀಟ್ಮೆಂಟ್ ಅವರದ್ದು, ನಮ್ಮ ಟ್ರೀಟ್ಮೆಂಟ್ ನಮ್ದು. ನಮ್ಮ ಕಡೆ ಕಂಪ್ಲೇಂಟ್ ಅಗಿಲ್ಲ ಎಂದಿದ್ದಾರೆ.
ಪೂಜಾ ಕ್ಲಿನಿಕ್ ವೈದ್ಯ ಡಾ.ಸಿದ್ದು ಪ್ರತಿಕ್ರಿಯಿಸಿ, 20016ರ ಕೋರ್ಟ್ ಆದೇಶ ಪ್ರಕಾರ ತುರ್ತು ಸಂದರ್ಭ ಆಯುಷ್ಮಾನ್ ವೈದ್ಯರೂ ಚಿಕಿತ್ಸೆ ನೀಡಬಹುದು. ನನ್ನ ಕೈಲಾದ ಚಿಕಿತ್ಸೆ ಕೊಡುತ್ತಿದ್ದೇನೆ. ಕೆಲವು ಕಾಣದ ಕೈಗಳು ನನ್ನ ವಿರುದ್ಧ ವೈದ್ಯಾಧಿಕಾರಿಗೆ ದೂರು ನೀಡಿದೆ ಎಂದರು.
Kshetra Samachara
06/02/2022 08:37 pm