ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಸ್ವಂತ ಕಟ್ಟಡ ಇದ್ದರೂ, ಬಾಡಿಗೆ ಕಟ್ಟಡಕ್ಕೆ ಮೊರೆ,ಸರಕಾರಕ್ಕೆ ಮಹಾವಂಚನೆ

ಬೆಂಗಳೂರು- ಬಿಬಿಎಂಪಿ ಅಧಿಕಾರಿಗಳಿಂದ ಸರ್ಕಾರಕ್ಕೆ ಮಹಾ ವಂಚನೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ನಾಗರೀಕರ ತೆರಿಗೆ ಹಣವನ್ನು ಸುಖಾ ಸುಮ್ಮನೆ ವ್ಯರ್ಥ ಮಾಡ್ತಿರುವ ಆರೋಪ ಬಿಬಿಎಂಪಿ ಅಧಿಕಾರಿಗಳ ಮೇಲಿದೆ.

ಹೌದು, ಬಿಬಿಎಂಪಿಯ ಸ್ವಂತ ಆಸ್ತಿಗಳು ಹಾಗೂ ಕಟ್ಟಡಗಳಲ್ಲಿ ಕೆಲಸ ಮಾಡಲು ಅಧಿಕಾರಿಗಳು ಹಿಂದೇಟು ಹಾಕ್ತಿದ್ದಾರೆ. ಪಾಲಿಕೆ ಕಟ್ಟಡಗಳನ್ನು ಬಿಟ್ಟು ಬೇರೆ ಬೇರೆ ಬಾಡಿಗೆ ಮನೆಗಳಲ್ಲಿ ಕಚೇರಿ ಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಇನ್ನೂ ಬಿಬಿಎಂಪಿ ಒಟ್ಟು ಆಸ್ತಿಗಳನ್ನು ನೋಡೋ ದಾದ್ರೆ ಬರೋಬ್ಬರಿ 6828 ಕಟ್ಟಡಗಳು ಪಾಲಿಕೆಯಲ್ಲಿವೆ.

ಪೂರ್ವ ವಲಯದಲ್ಲಿ- 917 ಪಶ್ಚಿಮ ವಲಯದಲ್ಲಿ - 781

ದಕ್ಷಿಣ ವಲಯದ- 903 ಯಲಹಂಕ ವಲಯದಲ್ಲಿ- 423

ಮಹದೇವಪುರ ವಲಯದಲ್ಲಿ- 576

ಬೊಮ್ಮನಹಳ್ಳಿ ವಲಯದಲ್ಲಿ- 481

ಆರ್.ಆರ್. ನಗರ. ವಲಯದಲ್ಲಿ- 493

ದಾಸರಹಳ್ಳಿ ವಲಯದಲ್ಲಿ - 212

ಇನ್ನೂವಾಣಿಜ್ಯ ಉದ್ದೇಶಕ್ಕೆ - 235

ಶೈಕ್ಷಣಿಕ ಉದ್ದೇಶ ಕ್ಕೆ - 24

ಸರ್ಕಾರಿ ಉದ್ದೇಶಕ್ಕೆ - 43

ಧಾರ್ಮಿಕ ಉದ್ದೇಶಕ್ಕೆ - 22

ಇಷ್ಟೆಲ್ಲಾ ಕಟ್ಟಡಗಳನ್ನ ಬಿಬಿಎಂಪಿ ನಿರ್ಮಿಸಿ ಅವೆಲ್ಲವನ್ನೂ ಕೂಡಾ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ.ಅದರಲ್ಲಿ 119 ಆಸ್ತಿಗಳ ಗುತ್ತಿಗೆ ಅವದಿ ಚಾಲ್ತಿಯಲ್ಲಿದ್ರೆ 116 ಆಸ್ತಿಗಳ ಗುತ್ತಿಗೆ ಅವದಿ ಮುಗಿದಿದೆ. ಇಷ್ಟೆಲ್ಲಾ ಖಾಲಿ ಆಸ್ತಿಗಳು ಇದ್ರೂ ಕೂಡಾ ಅಧಿಕಾರಿಗಳು ಮಾತ್ರ ಬಾಡಿಗೆ ಮೊರೆ ಹೋಗ್ತಿರೋದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Edited By : Nagesh Gaonkar
PublicNext

PublicNext

16/02/2022 11:03 am

Cinque Terre

32.26 K

Cinque Terre

0

ಸಂಬಂಧಿತ ಸುದ್ದಿ