ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಮಹಿಳೆ ಸಾವಲಂಬಿ ಬದುಕಿಗೆ ಗ್ರಾಮ ಪಂಚಾಯಿತಿ "ಸಹಾಯಹಸ್ತ'

ಆನೇಕಲ್:ಮಹಿಳೆಯರು ತಮ್ಮ ಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ , ಮತ್ತು ಮೂವತ್ತು ಜನ ವಿಶೇಷಚೇತನರಿಗೆ ಪ್ರತಿ ತಿಂಗಳ ಒಂದು ಸಾವಿರ ಮಾಸಾಸನ ನೀಡುವುದರ ಮೂಲಕ ಪ್ರೋತ್ಸಾಹ ನೀಡಲಾಯಿತು.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಗ್ರಾಮದ ಬಂಡಾಪುರದಲ್ಲಿ ಇಂದು ವಿಶೇಷ ಚೇತನರಿಗೆ ಪ್ರೋತ್ಸಾಹಧನ ಮತ್ತು ಮಹಿಳೆಗೆ ಸಹಾಯಧನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತ್ರಿಬಲ್ ವಾಲ್ ಖಾಸಗಿ ಕಂಪನಿಯ ಮಾಲೀಕ ಅಲೋಕ್ ಅಗರವಾಲ್ ಹಾಗೂ ಪಂಚಾಯಿತಿ ಅಧ್ಯಕ್ಷರು ಉದ್ಘಾಟನೆಯನ್ನು ನೆರವೇರಿಸಿದರು

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ಮಾತನಾಡಿ ತ್ರಿಬಲ್ ವಾಲ್ ಕಂಪನಿ ಸಹಯೋಗದಲ್ಲಿ ಮಹಿಳೆಯರಿಗೂ ಹೊಲಿಗೆ ಯಂತ್ರ ಮತ್ತು ದಿವ್ಯ ಚೇತನರಿಗೆ ಮಾಸಾಶನ ನೀಡಲಾಯಿತು ಗ್ರಾಮ ಪಂಚಾಯಿತಿ ಕೂಡ ಉತ್ತಮ ಕೆಲಸಗಳು‌ಸಹ‌ ಮಾಡುತಿದೆ ಎಂದು ಇನ್ನು ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

03/08/2022 05:15 pm

Cinque Terre

1.51 K

Cinque Terre

0

ಸಂಬಂಧಿತ ಸುದ್ದಿ