ಬೆಂಗಳೂರು: ದೇಶದಲ್ಲಿ130 ಕೋಟಿ ಜನರ ಮಾರುಕಟ್ಟೆ ಬೇರೆ ಯಾವ ದೇಶದಲ್ಲಿಯೂ ಸಿಗುವುದಿಲ್ಲ. ಜನರ ಬೇಕು- ಬೇಡಿಕೆಗಳನ್ನು ಈಡೇರಿಸಲು ಜನರಿಗೆ ಕೌಶಲ್ಯ ಬೇಕು. ಆ ಕೌಶಲ್ಯದ ಉಪಯೋಗವೇ ದೇಶದ ಭವಿಷ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಮ್ಮ ದೇಶದಲ್ಲಿ 46% ಯುವಕರಿದ್ದಾರೆ. ಅವರಿಗೆ ಜ್ಞಾನ, ಕೌಶಲ್ಯ, ಅವಕಾಶ ಕೊಟ್ಟರೆ ಅದು ದೇಶ ಕಟ್ಟಲು ಅನುಕೂಲ ಆಗುತ್ತದೆ. ಕೌಶಲ್ಯ ಜನರಲ್ಲಿ ಹೆಚ್ಚಿದಂತೆ ಮಾರುಕಟ್ಟೆಯ ಉಪಯೋಗ ಆಗುತ್ತದೆ ಎಂದರು.
ಈ ದೇಶವನ್ನು ದೊಡ್ಡ ದೊಡ್ಡ ಶ್ರೀಮಂತರು ಕಟ್ಟುತ್ತಿಲ್ಲ. ದುಡಿಯುವ ವರ್ಗ ದೇಶ ಕಟ್ಟುತ್ತಿದ್ದಾರೆ. ಆರ್ಥಿಕತೆಯಲ್ಲಿ ಬದಲಾವಣೆ ತರುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಯಾಗುತ್ತಿದೆ. ನಮ್ಮ ಯುವಕರು ಎಲ್ಲದರಲ್ಲಿಯೂ ಮುಂದೆ ಬರುತ್ತಿದ್ದಾರೆ. ಕೌಶಲ್ಯ ಮತ್ತು ತಂತ್ರಜ್ಞಾನವನ್ನು ನಮ್ಮ ಜೀವನದ ಪ್ರತಿಯೊಂದರಲ್ಲೂ ಉಪಯೋಗ ಆಗಬೇಕು. ಐಟಿ ಬಿಟಿಯಲ್ಲಿಯೂ ಜನ ಸಾಮಾನ್ಯರ ಉಪಯೋಗಕ್ಕೆ ತಕ್ಕ ಹಾಗೆ ಕೌಶಲ್ಯ ಉಪಯೋಗ ಆಗಬೇಕು ಎಂದು ಸಿಎಂ ಹೇಳಿದರು.
ಕೌಶಲ್ಯ ಭರಿತ ಕರ್ನಾಟಕ ಆಗುವ ಕನಸು ಕಾಣುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ದೊರೆಯಬೇಕು. ನಮ್ಮ ರಾಜ್ಯದಲ್ಲಿ 200 ಹೈಟೆಕ್ ಐಟಿಐ ಕಾಲೇಜುಗಳನ್ನು ಮಾಡುತ್ತಿದ್ದೇವೆ. ಬಜೆಟ್ ನಲ್ಲಿ ಘೋಷಿಸಿದಂತೆ ಆರು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದೇವೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎಂದು ಹೇಳಿದರು.
- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
14/07/2022 10:32 pm