ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುತ್ಥಳಿ ಅನಾವರಣ: ಗಂಗಸಂದ್ರ ಗ್ರಾಮದಲ್ಲಿ ಹಬ್ಬದ ವಾತಾವರಣ

ಕೆಂಗೇರಿ: 131 ನೇ ವರ್ಷದ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರದ ಗಂಗಸಂದ್ರ ಎಂಬ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಅನಾವರಣ ಮಾಡಲಾಯ್ತು. ಬೆಳಿಗ್ಗೆಯಿಂದಾನೂ ವೀರಗಾಸೆ, ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯುತ್ತಿದೆ. ಜಾತ್ರೆಯ ವಾತಾವಾರಣ ಗ್ರಾಮದಲ್ಲಿ ಮನೆಮಾಡಿದೆ.. ಪುತ್ಥಳಿಯನ್ನ ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಜಕುಮಾರ್ ಮತ್ತು ಊರಿನ ಗಣ್ಯರು ಅನಾವರಣಗೊಳಿಸಿದ್ರು.. ನಂತರ ಭಾರತದ ಸಂವಿಧಾನದ ಪುಸ್ತಕಗಳನ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ, ಗ್ರಾಮಸ್ಥರಿಗೆ ಕೊಟ್ಟು ಅಂಬೇಡ್ಕರ್ ಜಯಂತಿಯನ್ನ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ..

ಇದೇ ವೇಳೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ರಾಜ್ ಕುಮಾರ್, ಈಶ್ವರಪ್ಪನವರು ರಾಜೀನಾಮೆ ಕೊಡಬೇಕು, ಅವರನ್ನ ಮುಖ್ಯಮಂತ್ರಿಗಳು ವಜಾ ಮಾಡಬೇಕು, ಇಲ್ಲವಾದ್ದಲ್ಲಿ ನಾವು ಉಗ್ರವಾದ ಹೋರಾಟ ಮಾಡ್ತೇವೆ ಅಂದ್ರು

ರಂಜಿತ ಸುನಿಲ್

ಮೆಟ್ರೋ ಬ್ಯೂರೊ, ಪಬ್ಲಿಕ್ ನೆಕ್ಸ್ಟ್..

Edited By : Manjunath H D
PublicNext

PublicNext

14/04/2022 04:25 pm

Cinque Terre

28.98 K

Cinque Terre

0

ಸಂಬಂಧಿತ ಸುದ್ದಿ