ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಮನೆ ಕೆಲಸದ ಸಿಬ್ಬಂದಿ‌ ನಾಪತ್ತೆ

ಬೆಂಗಳೂರು: ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಮನೆಯಲ್ಲಿ ಕೆಲಸದಾಳು ಕಳ್ಳತನ‌ಮಾಡಿ ಎಸ್ಕೇಪ್ ಆಗಿದ್ದ ಪ್ರಕರಣ ಮಾಸುವ ಮುನ್ನವೇ ಇನ್ನೊಬ್ಬ ಕಾಂಗ್ರೆಸ್ ನಾಯಕನ‌ ಮನೆಯಲ್ಲಿ ಕೆಲಸದ ಸಿಬ್ಬಂದಿ ಕಾಣೆಯಾಗಿದ್ದಾನೆ.

ಶಾಸಕ ದಿನೇಶ್ ಗುಂಡೂರಾವ್ ಮನೆಯ ಕೆಲಸದ ಸಿಬ್ಬಂದಿ ಕಾಣೆಯಾಗಿದ್ದು, ಈ ಕುರಿತು ಆಪ್ತ ಸಹಾಯಕರಿಂದ ಸಂಜಯನಗರ ಠಾಣೆಗೆ ದೂರು ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂಜು ಶರ್ಮಾ ನಾಪತ್ತೆಯಾಗಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಸಂಜು ಶರ್ಮಾ 2ನೇ ತಾರೀಖು ಬೆಳಗ್ಗೆ ಮನೆಯಿಂದ ಹೊರ ಹೋದಾತ ವಾಪಸ್ ಬಂದಿಲ್ಲ ಎಂದು ದೂರು ನೀಡಲಾಗಿದೆ‌.

ಸದ್ಯ ಮನೆಯಲ್ಲಿ ಕಳ್ಳತನವಾದ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಸಿಬ್ಬಂದಿ ಕಾಣೆಯಾಗಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಜು ಶರ್ಮಾ ಪತ್ತೆಗೆ ಪೊಲೀಸ್ರು ಮುಂದಾಗಿದ್ದಾರೆ.

Edited By : Nagaraj Tulugeri
PublicNext

PublicNext

10/09/2022 12:03 pm

Cinque Terre

14.34 K

Cinque Terre

0

ಸಂಬಂಧಿತ ಸುದ್ದಿ