ಬೆಂಗಳೂರಿನ: ಚಾಮರಾಜಪೇಟೆ ವ್ಯಾಪ್ತಿ ಆಜಾದ್ ನಗರ ಬಿಬಿಎಂಪಿ ವಾರ್ಡ್ 141ರ ಮಾಜಿ ಕಾಪೋರೇಟರ್ ಗೌರಮ್ಮಳಿಗೆ ಸೇರಿದ 3.35 ಕೋಟಿ ಆಸ್ತಿನ ED ಜಪ್ತಿ ಮಾಡಿದೆ. 2010 ರಿಂದ 2013 ವರೆಗಿನ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಗೌರಮ್ಮ ಕುಟುಂಬ ಅಕ್ರಮ ಆಸ್ತಿ ಸಂಪಾದನೆ ಮಾಡಿದೆ ಎಂಬ ದೂರು ದಾಖಲಾಗಿತ್ತು.
ಮಾಜಿ ಕಾರ್ಪೊರೇಟರ್ ಗೌರಮ್ಮ& ಪತಿ ಸಿ.ಗೋವಿಂದರಾಜು ವಿರುದ್ದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.1988 ರ ಭ್ರಷ್ಟಾಚಾರ ತಡೆ ಕಾಯ್ದೆ 13(2) ಕಲಂ13(1)(ಇ) ಅಡಿಯಲ್ಲಿ & IPC ಸೆಕ್ಷನ್ 120(ಬಿ) ಅನ್ವಯ ಪ್ರಕರಣ ದಾಖಲಿಸಿ ಲೋಕಾಯುಕ್ತ ತನಿಖೆ ನಡೆಸಿತ್ತು.
ಲೋಕಾಯುಕ್ತ ದೂರಿನ ಹಿನ್ನೆಲೆ ಈ ಬಗ್ಗೆ ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆ ನಡೆಸಿತ್ತು. ಈ ವೇಳೆ ಗೌರಮ್ಮಳ ಪತಿ ಸಿ.ಗೋವಿಂದರಾಜು ಜತೆ ಸೇರಿ ಹಣವನ್ನು ಸ್ವಂತ ಬ್ಯಾಂಕ್ ಅಕೌಂಟ್ಗಳಿಗೆ ವರ್ಗಾವಣೆ ಮಾಡಿರುವುದು ಸಾಭೀತಾಗಿತ್ತು. ಕಾರ್ಪೋರೆಟರ್ ಆಗಿದ್ದ ವೇಳೆ ಅಕ್ರಮವಾಗಿ ಹಣ ಸಂಪಾದನೆ ಮಾಡಿ, ಕೃಷಿ ಭೂಮಿ, ಪ್ಲಾಟ್ & ಕಮರ್ಷಿಯಲ್ ಕಾಂಪ್ಲೆಕ್ಸ್ ಸಂಪಾದನೆ ಮಾಡಿದ್ದರು. ಒಟ್ಟು 3.46 ಕೋಟಿ ಮೌಲ್ಯದ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು ದೃಢಪಟ್ಟ ಹಿನ್ನಲೆ ಇದೀಗ ED ಅಷ್ಟು ಆಸ್ತಿಯನ್ನು ಜಪ್ತಿ ಮಾಡಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್
PublicNext
02/08/2022 10:26 pm