ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೃಹ ಸಚಿವರ ವಿರುದ್ಧ ನಿಂದನಾತ್ಮಕ ಹೇಳಿಕೆ: ಬಿ.ಕೆ ಹರಿಪ್ರಸಾದ್ ವಿರುದ್ಧ ದೂರು

ಬೆಂಗಳೂರು: ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಬಿಜೆಪಿ ಮುಖಂಡ ಎನ್.ಆರ್‌.ರಮೇಶ್ ದೂರು ನೀಡಿದ್ದಾರೆ.

ಇತ್ತೀಚೆಗೆ ಫ್ರೀಡಂಪಾರ್ಕ್ ನಲ್ಲಿ ಬಿ.ಕೆ.ಹರಿಪ್ರಸಾದ್, ಗೃಹ ಸಚಿವರ ವಿರುದ್ಧ ಹಗುರವಾಗಿ ಹಾಗೂ ನಿಂದನಾತ್ಮಕವಾಗಿ ಮಾತನಾಡಿ ಮಾನಹಾನಿ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾರೆ‌. 'ಗೃಹ ಸಚಿವರಿಗೆ ಹೆಂಡ ಕುಡಿಯುವ ಅಭ್ಯಾಸ ಇದೆಯೋ ..‌ಇಲ್ಲವೋ... ಗಾಂಜಾ ಸೇದುವ ಅಭ್ಯಾಸವಿದೆಯಾ?' 'ಆರಗ ಜ್ಞಾನೇಂದ್ರ ಅಜ್ಞಾನ ಜ್ಞಾನೇಂದ್ರ' ಎಂದು ಹರಿಪ್ರಸಾದ್ ನಿಂದಿಸಿದ್ದರು‌‌.

Edited By : Nagaraj Tulugeri
PublicNext

PublicNext

13/04/2022 03:38 pm

Cinque Terre

12.27 K

Cinque Terre

2

ಸಂಬಂಧಿತ ಸುದ್ದಿ