ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಪ್ಪು ಅಗಲಿಕೆಯಿಂದ ಭಾವುಕರಾಗಿ ಕಂಬನಿ ಮಿಡಿದಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದ ಡಿಕೆಶಿ ಮಾಧ್ಯಮಕ್ಕೆ ಮಾತನಾಡೋ ಸಮಯದಲ್ಲಿ ಕೆಲ ಕ್ಷಣ ಭಾವುಕರಾಗಿದ್ದರು. ಕಣ್ಣಂಚಲ್ಲಿ ನೀರು ತುಂಬಿಕೊಂಡು ಅರ್ಧಕ್ಕೆ ಮಾತನಾಡೋದನ್ನೇ ನಿಲ್ಲಿಸಿದರು. ಪುನೀತ್ ಜೊತೆಗೆ ತಮಗಿದ್ದ ಆತ್ಮೀಯತೆ ಹಾಗೂ ಪುನೀತ್ ವರ್ಕೌಟ್ ಬಗ್ಗೆ ಡಿಕೆಶಿ ಮಾತನಾಡುತ್ತಲೇ ಭಾವುಕರಾಗಿದ್ದರು. ಆ ವೀಡಿಯೋ ಇಲ್ಲಿದೆ.
Kshetra Samachara
31/10/2021 01:10 pm