ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 29 ದಿನಗಳಲ್ಲಿ ಸಾವಿರ ಕೋಟಿ ತೆರಿಗೆ ಸಂಗ್ರಹ- ಬಿಬಿಎಂಪಿ ಇತಿಹಾಸದಲ್ಲೇ ದಾಖಲೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಕಡಿಮೆ ದಿನದಲ್ಲಿ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಹೌದು. ಆರ್ಥಿಕ ವರ್ಷದವಾದ ಏಪ್ರಿಲ್‌ನಲ್ಲಿ ಶೇ 5 ತೆರಿಗೆ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಹೆಚ್ಚು ಟ್ಯಾಕ್ಸ್ ಕಲೆಕ್ಟ್ ಆಗಿದೆ. ಪ್ರಸಕ್ತ ವರ್ಷದ 2022-23ನೇ ಸಾಲಿನ ಆಸ್ತಿ ತೆರಿಗೆಯಿಂದ 4,500 ಕೋಟಿ ರೂ. ಸಂಗ್ರಹದ ಗುರಿಯನ್ನು ಬಿಬಿಎಂಪಿ ಇಟ್ಟುಕೊಂಡಿದೆ. ಮೊದಲ ತಿಂಗಳ 29ರವರೆಗೆ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಕಳೆದ ವರ್ಷ 2021 -22ರಲ್ಲಿ ಏಪ್ರಿಲ್ ತಿಂಗಳ 29ರವರೆಗೆ 860 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು 2020-21ರಲ್ಲಿ 312 ಕೋಟಿ ರೂ. ಸಂಗ್ರಹವಾಗಿತ್ತು. ಇದೇ ವೇಳೆ ಶೇ 5 ತೆರಿಗೆ ವಿನಾಯಿತಿ ಇಂದು ಕೊನೆಯಾಗಲಿದೆ. ಮೇ ತಿಂಗಳವರೆಗೆ ವಿಸ್ತರಿಸುವಂತೆ ಸಾರ್ವಜನಿಕರು ಕೋರಿದ್ದರೂ ಪಾಲಿಕೆ ವಿಸ್ತರಣೆಗೆ ನಿರಾಕರಿಸಿದೆ.

Edited By : Vijay Kumar
Kshetra Samachara

Kshetra Samachara

30/04/2022 09:38 am

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ