ಬೆಂಗಳೂರು: ಗಣೇಶ ಹಬ್ಬ ಇನ್ನೇನು ಹತ್ತಿರವಾಗ್ತಿದ್ದಂತೆ ನಗರ ಪೊಲೀಸ್ರು ಹೈ ಅಲರ್ಟ್ ಆಗಿದ್ದಾರೆ. ಅದ್ರಲ್ಲೂ ಈ ಬಾರಿ ಬೆಂಗಳೂರು ಗಣೇಶೋತ್ಸವ ಹಿಂದಿನ ಗಣೇಶೋತ್ಸವದಂತಿಲ್ಲ. ಈ ಬಾರಿ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಪೊಲೀಸ್ರು ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ ಮುತುವರ್ಜಿ ಕೂಡ ವಹಿಸಿದ್ದಾರೆ.
ಚಾಮರಾಜಪೇಟೆ ಮೈದಾನ ಹಾಗೂ ನಗರದ ಪ್ರಮುಖ ಗಣೇಶೋತ್ಸವದ ಬಂದೋಬಸ್ತ್ ಕುರಿತು ಚರ್ಚೆ ಇಂದು ಕಮಿಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಎಲ್ಲಾ ವಿಭಾಗದ ಡಿಸಿಪಿಗಳು ಹಾಗೂ ಅಧಿಕಾರಿಗಳ ಜೊತೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಭೆ ನಡೆಸಿದ್ದು ಸಭೆಯಲ್ಲಿ ಫೈರ್ ಫೋರ್ಸ್ ,ಬಿಬಿಎಂಪಿ ಬೆಸ್ಕಾಂ ಸೇರಿ ಪ್ರಮುಖ ಇಲಾಖೆಯ ಅಧಿಕಾರಿಗಳಯ ಭಾಗವಹಿಸಿದ್ದಾರೆ.
ನಗರದ ಕಾನೂನು ಸುವ್ಯವಸ್ಥೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು ಬಂದೋಬಸ್ತ್ ಹೆಚ್ಚಿಸಲು ಸಭೆಯಲ್ಲಿ ಚರ್ಚಿಸಲಾಗಿದೆ.
Kshetra Samachara
28/08/2022 07:49 am